ಮಡಿಕೇರಿ, ಏ. 26: ಗೋವುಗಳನ್ನು ಪೂಜಿಸುವ ಸಂಸ್ಕøತಿಯೊಂದಿಗೆ ಹಲವು ಧಾರ್ಮಿಕ ಕಾರ್ಯಗಳೂ ನಡೆಯುವ ಪ್ರತೀತಿ ಇರುವ ಕೊಡಗು ಜಿಲ್ಲೆಯಲ್ಲಿ ಆಶ್ರಯವಿಲ್ಲದೆ ಕಂಡುಬರುವ, ಬದುಕಲು ಅಲ್ಲಲ್ಲಿ ತಿರುಗಾಡುತ್ತಾ ಆಹಾರ ಅರಸಿ ಸಾಗುವ ಗೋ ಸಂತತಿಯ ರಕ್ಷಣೆಗೆ ಸಂಘಟನೆ ಯೊಂದು ಹೊಸ ಪರಿಕಲ್ಪನೆಯಲ್ಲಿದೆ.ಈ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಎಸ್.ವಿ.ಕೆ.ಎಸ್.ಜೆ.ಎಸ್. ಟ್ರಸ್ಟ್ ನೋಂದಾಯಿತವಾಗಿದ್ದು, ಕುಂದಚೇರಿ ಗ್ರಾ.ಪಂ.ನ ಚೆಟ್ಟಿಮಾನಿಯಲ್ಲಿ ಶ್ರೀ ಕೃಷ್ಣ ಗೋಶಾಲೆ ಎಂಬ ಕನಸ್ಸಿನ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇದು ಪ್ರಸ್ತುತ ಸಾಧಾರಣ ರೀತಿಯಲ್ಲಿ ಪ್ರಾರಂಭ ಗೊಂಡಿದ್ದು, ಇದನ್ನು ‘ನಂದ ಗೋಕುಲ’ವನ್ನಾಗಿ ಪರಿವರ್ತಿಸಲು ಈ ಸಂಸ್ಥೆಯ ಪ್ರಮುಖರಾದ ಅಧ್ಯಕ್ಷ ಹರೀಶ್ ಆಚಾರ್ಯ ಹಾಗೂ ಆಡಳಿತ ಮಂಡಳಿ ಕಾರ್ಯ ಚಟುವಟಿಕೆ ಹಮ್ಮಿಕೊಂಡಿದ್ದಾರೆ.

ಸದ್ಯದ ಮಟ್ಟಿಗೆ ಇದಕ್ಕಾಗಿ 6 ಎಕರೆ ಜಾಗವನ್ನು ಲೀಸ್ ಆಧಾರದಲ್ಲಿ ಪಡೆಯಲಾಗಿದ್ದು, 45 ದನಗಳು ಆಶ್ರಯದಲ್ಲಿವೆ. ಇಲ್ಲಿ ಸುಸಜ್ಜಿತವಾದ ಕೊಟ್ಟಿಗೆ, ಮೇವು ಸಹಿತವಾದ ಆಹಾರ, ನೀರು, ರೋಗ-ರುಜಿನಗಳಿದ್ದಲ್ಲಿ ಅದಕ್ಕೆ ಶುಶ್ರೂಷೆ ಒದಗಿಸುವ ಪ್ರಯತ್ನಕ್ಕೆ ಚಿಂತನೆ ಇದ್ದು, ಇದಕ್ಕಾಗಿ ಈ ಟ್ರಸ್ಟ್ ಜಿಲ್ಲೆಯ ದಾನಿಗಳ ಸಹಾಯವನ್ನು ನಿರೀಕ್ಷಿಸುತ್ತಿದೆ. ಅಲ್ಲಲ್ಲಿ ಬೀಡಾಡಿಯಾಗಿ ತಿರುಗುವ ಜಾನುವಾರುಗಳು ಜನರು ಸಾಕಲಾರದೆ ಬೀದಿಗೆ ಬಿಡುವಂತದ್ದು ಪೊಲೀಸ್-ನ್ಯಾಯಾಲಯದ ಮೂಲಕ ದಾಖಲಾಗುವ ಪ್ರಕರಣಗಳಿಂದ ಮರು ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಇವುಗಳನ್ನು ಗೋಶಾಲೆಗೆ ಸೇರಿಸಿಕೊಂಡು ಸಲಹುವುದು ಈ ತಂಡದ ಕನಸ್ಸಾಗಿದೆ.ಇದಕ್ಕಾಗಿ ಉದ್ದೇಶಿತ ಗೋಶಾಲೆಯ ಜಾಗದಲ್ಲಿ ಹಲವಾರು ವ್ಯವಸ್ಥೆಗಳಾಗಬೇಕಿದೆ. ಗಾಳಿ-ಮಳೆಯಿಂದ ರಕ್ಷಣೆಗೆ ಕೊಟ್ಟಿಗೆ, ದಿನಂಪ್ರತಿ ಮೇವು-ನೀರು ಒದಗಿಸುವುದು, ರೋಗ ರುಜಿನಗಳಿಗೆ ಔಷಧಿ ನೀಡುವುದು ಮತ್ತಿತರ ಅಗತ್ಯತ್ಯೆಗಳು ಈ ತಂಡಕ್ಕೆ ಸವಾಲಾಗಿದ್ದು, ಇದಕ್ಕಾಗಿ ದಾನಿಗಳ ನೆರವನ್ನು ಬಯಸುತ್ತಿರುವುದಾಗಿ ಹರೀಶ್ ಆಚಾರ್ಯ ಅವರು ತಿಳಿಸಿದ್ದಾರೆ.ಕೊಡಗಿನಲ್ಲಿ 2018ನೇ ಇಸವಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಜನರು ಮನೆ, ತೋಟಗಳನ್ನು ಕಳೆದುಕೊಂಡಾಗ ಹಲವಾರು ಗೋವುಗಳು ಕೂಡ ನೆಲೆ ಕಳೆದುಕೊಂಡವು. ಗೋವುಗಳ ಮಾಲೀಕರು ಕೂಡ ಗೋವುಗಳನ್ನು ಸಾಕಲು ಆಗದೆ ನೋವನ್ನು ಅನುಭವಿಸಿದರು. ಗೋವುಗಳು ಆಹಾರ ಅರಸುತ್ತಾ ಕೊಡಗಿನ ಕೆಲವು ನಗರಗಳನ್ನು ಸೇರಿಕೊಂಡವು.

ಈ ದನಗಳೆಲ್ಲವೂ ನಗರದಲ್ಲಿ ಓಡಾಡುತ್ತ ಅಲ್ಲೇ ಕರುಗಳಿಗೆ ಜನ್ಮ ನೀಡಿ ಸಿಕ್ಕಿದ ಕಸ ಕಡ್ಡಿಗಳನ್ನು, ಪ್ಲಾಸ್ಟಿಕ್‍ಗಳನ್ನು ತಿಂದು ಬದುಕುತ್ತಿವೆ, ಇದರಲ್ಲಿ ಸುಮಾರು ದನಗಳು ಕಾಣೆಯಾಗಿದೆ. ಯಾರೂ ಕೂಡ ಈ ದನಗಳ ಸಂತತಿ ಉಳಿವಿಗಾಗಿ ಮುಂದೆ ಬರಲಿಲ್ಲ. ಸರಕಾರ ಕೂಡ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ.

ಹೀಗೆ ಮುಂದುವರೆದಲ್ಲಿ ಇನ್ನು ಕೆಲವೇ ವರುಷಗಳಲ್ಲಿ ಕೊಡಗಿನಲ್ಲಿ ದನಗಳ ಸಂತತಿಯೇ ನಾಶವಾಗುವು ದರಲ್ಲಿ ಸಂಶಯವಿಲ್ಲ. ಈಗ ಏನಾದರೂ ಮಾಡಿ ಗೋವುಗಳ ಸಂತತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ (ಮೊದಲ ಪುಟದಿಂದ) ಎಸ್‍ವಿಕೆಎಸ್‍ಜೆಎಸ್ ಟ್ರಸ್ಟ್ ಮುಂದೆ ಬಂದಿರುತ್ತದೆ.

ಮಡಿಕೇರಿ ತಾಲೂಕು, ಭಾಗಮಂಡಲ ಸಮೀಪ ಕುಂದಚೇರಿ ಗ್ರಾಮ ಚೆಟ್ಟಿಮಾನಿಯಲ್ಲಿ 6 ಎಕರೆ ಜಾಗದಲ್ಲಿ ಸುಸಜ್ಜಿತವಾದ ಗೋಶಾಲೆ ಮಾಡಲು ತೀರ್ಮಾನಿಸಿ ಗೋ ಶಾಲೆಯ ಕೆಲಸಗಳು ಭರದಿಂದ ಸಾಗುತ್ತಿದೆ. ಹಚ್ಚಹಸಿರಿನ ರಮಣೀಯ ಸ್ಥಳದಲ್ಲಿ ಸುಸಜ್ಜಿತ ಗೋ ಶಾಲೆಯಲ್ಲಿ ದನಗಳಿಗೆ ಮೇಯಲು ಸ್ಥಳಾವಕಾಶ, ನೀರು, ಆಹಾರದ ವ್ಯವಸ್ಥೆ, ವಿದ್ಯುಚ್ಛಕ್ತಿ, ಮುಳ್ಳಿನ ಬೇಲಿ ಮತ್ತು ಗೋವಿಗೆ ಶೆಡ್ಡ್‍ಗಳ ವ್ಯವಸ್ಥೆಯ ಕೆಲಸಗಳು ನಡೆಯುತ್ತಿದೆ.

ಮಡಿಕೇರಿ ಮತ್ತು ಕುಶಾಲನಗರ ದಲ್ಲಿ ಬೀಡಾಡಿ ದನಗಳು ಸುಮಾರು 200 ಕ್ಕಿಂತಲೂ ಹೆಚ್ಚಾಗಿರುವುದರಿಂದ ಇವುಗಳೆಲ್ಲವನ್ನೂ ಗೋಶಾಲೆಯಲ್ಲಿ ಸಾಕಲಾಗುವುದು ಮತ್ತು ಕೊಡಗಿನಲ್ಲಿ ಮನೆ ಮನೆಯಲ್ಲಿರುವ ದನಗಳನ್ನು ಸಾಕಲಸಾಧ್ಯವಾದವರು ಕೂಡ ತಂದು ಗೋ ಶಾಲೆಯಲ್ಲಿ ಬಿಡುವುದಾಗಿ ತಿಳಿಸಿರುತ್ತಾರೆ.

ಸುಸಜ್ಜಿತ ಗೋಶಾಲೆಯ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿಗಳು ಖರ್ಚಾಗುವುದ ರಿಂದ ಗೋವಿನ ಉಳಿವಿಗಾಗಿ ದಾನಿಗಳು ಸಹಾಯ ಮಾಡ ಬೇಕೆಂದು ಅವರು ವಿನಂತಿಸುತ್ತಾರೆ.

ಪ್ರತಿ ವರ್ಷ ಮಕ್ಕಳ ಹುಟ್ಟುಹಬ್ಬದಂದು ನಮ್ಮ ಗೋಶಾಲೆಗೆ ಅವರ ಹೆಸರಿನಲ್ಲಿ ನಿಮ್ಮಿಂದ ಆದಷ್ಟು ಹಣವನ್ನು ಟ್ರಸ್ಟಿನ ಹೆಸರಿನ ಎಕೌಂಟ್ ನಂಬರ್‍ಗೆ Pಚಿಥಿಣm oಡಿ ಉoogಟe Pಚಿಥಿಯ ಮುಖಾಂತರ ಧನಸಹಾಯ ನೀಡಿ. ಮಕ್ಕಳ ಹೆಸರಿನಲ್ಲಿ 2 ಗೋವುಗಳಿಗೆ ಆಹಾರ ನೀಡಿದಂತಾಗುತ್ತದೆ. ಹಾಗೆಯೇ ಹಿರಿಯರು ಯಾರಾದರೂ ದೈವಾಧೀನರಾದಾಗ ಈ ರೀತಿಯಲ್ಲಿ ಸಹಾಯ ಮಾಡಬಹುದು ಮತ್ತು ಗೋವುಗಳಿಗೆ ದಾನ ಮಾಡಿದಂತಾಗುತ್ತದೆ.

ಗೋಶಾಲೆಯ ನಿರ್ಮಾಣಕ್ಕೆ ಸಹಾಯ ರೂಪದಲ್ಲಿ ಸಿಮೆಂಟ್, ಜೆಲ್ಲಿ, ಇಟ್ಟಿಗೆ, ಶೀಟ್, ಪೈಪ್ ಇತ್ಯಾದಿಗಳನ್ನು ದಾನ ನೀಡಬಹುದು.

ನೆರವು ನೀಡುವವರು ಖಿಡಿusಣ ಓಚಿme: SಗಿಏSಎS ಖಿಡಿusಣ ಲ, ಂ/ಛಿ ಓo.: 897310210000001, IಈSಅ ಅoಜe: ಃಏIಆ0008973, ಃಚಿಟಿಞ oಜಿ Iಟಿಜiಚಿ, ಒಚಿಜiಞeಡಿi ಃಡಿಚಿಟಿಛಿh, ಒob: 7899260138 ಸಂಪರ್ಕಿಸಬಹುದಾಗಿದೆ.