ಮಡಿಕೇರಿ, ಏ. 26; ಜಗಜ್ಯೋತಿ ಬಸವಣ್ಣ ಅವರ ಜಯಂತಿಯನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಚರಿಸಲಾಯಿತು. ಎಸ್ಪಿ ಸುಮನ್ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು.ನಗರದ ಮಹದೇವಪೇಟೆ ಯಲ್ಲಿರುವ ಕೂರ್ಗ್ ಪಾಥ್ ಕೇರ್ ಕ್ಲೀನಿಕ್‍ನಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು. ವೈದ್ಯಾಧಿಕಾರಿ ಡಾ. ಸತೀಶ್ ವಿ. ಮಲ್ಲಯ್ಯ, ಖ್ಯಾತ ಮಕ್ಕಳ ತಜ್ಞ ಡಾ|| ಎಸ್.ಶಿಲ್ಪ ಸತೀಶ್, ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹೆಚ್.ವಿ. ದೇವದಾಸ್ ಬಸವಣ್ಣ ಅವರ ಕುರಿತು ಮಾತನಾಡಿದರು.

ನಗರಸಭಾ ಮಾಜಿ ಸದಸ್ಯ ಹೆಚ್.ಎಂ.ನಂದಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೂರ್ಗ್ ಪಾಥ್ ಕೇರ್ ಮಾಲೀಕರಾದ ಕೆ.ಎಸ್.ಸೋಮಶೇಖರ್, ಹರೀಶ್ ಎಸ್.ಎಲ್, ಮಡಿಕೇರಿ ಬಸವೇಶ್ವರ ದೇವಸ್ಥಾನ ಸಮಿತಿ ಸಹಕಾರ್ಯದರ್ಶಿ ಕುಮಾರ್.ಎಂ, ಕೂರ್ಗ್ ಪಾಥ್ ಕೇರ್‍ನ ಲಕ್ಷ್ಮಣ ಶೆಟ್ಟಿ, ರೂಪ, ಪೂಜಾ, ಕವಿತಾ ಹಾಗೂ ರಕ್ಷಿತಾ ಹಾಜರಿದ್ದರು. *ಪ್ರಸ್ತುತ ಜಿಲ್ಲಾಡಳಿತದ ಅಧೀನದಲ್ಲಿರುವ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಬಸವ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಮಹದೇವಪೇಟೆಯ ಶ್ರೀಬಸವೇಶ್ವರ ದೇವಾಲಯದಲ್ಲಿ ಬಸವಣ್ಣನವರ ಜಯಂತ್ಯೋತ್ಸವವನ್ನು ದೇವಾಲಯ ಸಮಿತಿಯ ಪ್ರಮುಖರು ವಿಶೇಷ ಪೂಜೆಯ ಮೂಲಕ ಆಚರಿಸಿದರು.

ಕೊಡಗು ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ

(ಮೊದಲ ಪುಟದಿಂದ) ವತಿಯಿಂದ ಬಸವೇಶ್ವರರ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ಬಸವೇಶ್ವರರ ಭಾವಚಿತ್ರಕ್ಕೆ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ದೇವರು ಪುಷ್ಪಾರ್ಚನೆ ಮಾಡಿದರು. ಬಸವೇಶ್ವರರ ಕುರಿತು ಉಪನ್ಯಾಸಕ ವೆಂಕಟನಾಯಕ್ ಉಪನ್ಯಾಸ ನೀಡಿದರು. ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಧುಸೂದನ್, ಡಾ. ಪ್ರತಾಪ್, ಡಾ.ಅಂಜಲಿ ಸಿದ್ದೇಶ್, ಡಾ.ಆಫ್ರೀನ್, ಹಿರಿಯ ಪಾರ್ಮಾಸಿಸ್ಟ್ ಬಿ.ನಟರಾಜು ಇದ್ದರು. ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.

ಕುಶಲನಗರ ಜಿಲ್ಲಾ ವೀರಶೈವ ಸಮಾಜ ಮತ್ತು ಜಿಲ್ಲಾ ವೀರಶೈವ - ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಸವ ಜಯಂತಿಯನ್ನು ಕುಶಾಲನಗರದ ಕರಿಯಪ್ಪ ಬಡಾವಣೆಯ ಕಾರ್ನರ್‍ನಲ್ಲಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಸ್.ನಂದೀಶ್ ಅವರ ಮನೆಯಂಗಳದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ಇದೇ ವೇಳೆ ಜಿಲ್ಲಾ ವೀರಶೈವ - ಲಿಂಗಾಯಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ನಂದೀಶ್ ಅವರು ಬಡಾವಣೆ ಬಳಿ ಇರುವ ಕೂಲಿ ಕಾರ್ಮಿಕರಿಗೆ ನೀಡಿದ ಆಹಾರ ಕಿಟ್‍ಗಳನ್ನು ಪೆÇಲೀಸ್ ಇನ್ಸ್‍ಪೆಕ್ಟರ್ ಎಂ.ಮಹೇಶ್ ವಿತರಿಸಿದರು.

ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿದರು. ಶಿಕ್ಷಕ ಹುಲುಸೆ ಬಸವರಾಜ್ ವಚನ ಗಾಯನ ಮಾಡಿದರು.

ಜಿಲ್ಲಾ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಮೂರ್ತಿ, ಗೌರವ ಕೋಶಾಧಿಕಾರಿ ಎಚ್.ಪಿ. ಉದಯಕುಮಾರ್, ತಾಲೂಕು ಶರಣ ಸಾಹಿತ್ಯ ಪರಿಷÀತ್ ಅಧ್ಯಕ್ಷ ಪಿ.ಮಹಾದೇವಪ್ಪ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಸ್.ಕೆ.ಸೌಭಾಗ್ಯ, ನೌಕರರ ಸಂಘದ ಪದಾಧಿಕಾರಿಗಳಾದ ಎಸ್.ವಿರೂಪಾಕ್ಷ, ಎಂ.ಎಸ್.ಗಣೇಶ್, ಎಸ್.ಆರ್.ಶಿವಲಿಂಗ, ಟಿ.ಬಿ.ಮಂಜುನಾಥ್, ಇತರರು ಇದ್ದರು.

ಸೋಮವಾರಪೇಟೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರಪೇಟೆಯಲ್ಲಿ ಜಗಜ್ಯೋತಿ ಬಸವೇಶ್ವರರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಪಟ್ಟಣದ ಕಕ್ಕೆಹೊಳೆ ಸಮೀಪದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ತಹಶೀಲ್ದಾರ್ ಗೋವಿಂದರಾಜು, ಶರಣ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಎಸ್.ಮಹೇಶ್ ಮಾಲಾರ್ಪಣೆ ಮಾಡಿದರು.

ಕಿಟ್ ವಿತರಣೆ: ಬಸವೇಶ್ವರ ಜಯಂತಿಯ ಪ್ರಯುಕ್ತ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಘಟಕದ ವತಿಯಿಂದ ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಟ್ಟಣ ಪಂಚಾಯ್ತಿಯ ದಿನಗೂಲಿ ಪೌರ ಕಾರ್ಮಿಕರ 20 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭ ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕ ಉದಯ ಕುಮಾರ್ ಉಪಸ್ಥಿತರಿದ್ದರು. ತಾಲೂಕು ಆಡಳಿತದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಆಗಿರುವ ಗೋವಿಂದರಾಜು ಮತ್ತು ಸಿಬ್ಬಂದಿಗಳು ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು.