ಕುಶಾಲನಗರ, ಏ. 26: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಪ್ರೋತ್ಸಾಹ ಧನ ಮತ್ತು ಸ್ಯಾನಿಟೈಸರ್ ಗಳನ್ನು ನೀಡಿ ಗೌರವಿಸಲಾಯಿತು.

ಸಂಕಷ್ಟದ ಸಂದರ್ಭದಲ್ಲಿ ಆಶಾ ಕಾರ್ಯಕರ್ತರ ಶ್ರಮ ಅವಿಸ್ಮರಣೀಯ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣ ಕುಮಾರ್ ಶ್ಲಾಘಿಸಿದರು.

32 ಆಶಾ ಕಾರ್ಯಕರ್ತರಿಗೆ 1750 ರೂಪಾಯಿ ಹಣ ಮತ್ತು ಸೋಪ್ ಸ್ಯಾನಿಟೈಸರ್‍ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಸಹಕಾರ ಸಂಘಗಳ ಉಪ ನಿಬಂಧಕ ಸಲಿಂ, ಸಂಘದ ಉಪಾಧ್ಯಕ್ಷ ವಿ.ಎಸ್.ಅನಂದಕುಮಾರ್, ನಿರ್ದೇಶಕರಾದ ಡಿ.ವಿ.ರಾಜೇಶ್, ಅಬ್ದುಲ್ ಖಾದರ್, ಯತೀಶ್, ಜಗದೀಶ್, ಮಧುಸೂದನ್, ವ್ಯವಸ್ಥಾಪಕ ಲೋಕೇಶ್, ಸಿಬ್ಬಂದಿ ವಿಜಯಕುಮಾರ್ ಮುಂತಾದವರು ಹಾಜರಿದ್ದರು.

ಕೂಡಿಗೆ

ಪ್ರಜಾಸತ್ಯ ಪತ್ರಿಕೆ ವತಿಯಿಂದ ಕುಶಾಲನಗರ ಹೋಬಳಿ ಐದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕೂಡಿಗೆ, ಹೆಬ್ಬಾಲೆ, ಕೂಡುಮಂಗಳೂರು, ತೊರೆನೂರು, ಶಿರಂಗಾಲ ಭಾಗದ 48 ಅಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಡಿ.ಹೆಚ್.ಓ. ಮೋಹನ್, ಕೂಡುಮಂಗಳೂರು ಸಹಕಾರ ಸಂಘ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ ಪ್ರಜಾಸತ್ಯ ಪತ್ರಿಕೆಯ ಸಂಪಾದಕ ಡಾ. ಬಿ.ಸಿ. ನವೀನ್ ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಚಂದ್ರಮೋಹನ್, ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟ್ಟಿ ಪತ್ರಕರ್ತರಾದ ಮೂರ್ತಿ, ದಿನೇಶ್ ಹಾಜರಿದ್ದರು.