ವೀರಾಜಪೇm,É ಏ. 26: ಕೇರಳದಿಂದ ಕೊಡಗಿಗೆ ವಲಸೆ ಬಂದು ಇಲ್ಲಿನ ಚೆಂಬೆಬೆಳ್ಳೂರು ಗ್ರಾಮದ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ನಾಲ್ಕು ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಕೊಡಗು ಕೇರಳ ಗಡಿ ಪ್ರದೇಶದ ಮಾಕುಟ್ಟ ವ್ಯಾಪ್ತಿಯ ಗಡಿಭಾಗದ ಕಾಫಿ ತೋಟವೊಂರದಲ್ಲಿ ಸಂಶಯಾಸ್ಪದ ವಾಗಿ ಸಂಚರಿಸುತ್ತಿದ್ದಾಗ ಅರಣ್ಯ ರಕ್ಷಕರಿಗೆ ಸಿಕ್ಕಿ ಬಿದ್ದಿದ್ದು ಇಲ್ಲಿನ ವಿಭಾಗ ಅರಣ್ಯ ಕಚೇರಿಯ ಅಧಿಕಾರಿಗಳು ಮಹಜರು ನಡೆಸಿ ಎಲ್ಲರಿಂದಲೂ ಹೇಳಿಕೆ ಪಡೆದು ಇಲ್ಲಿನ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ಗಳು ಅಕ್ರಮವಾಗಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ (ಮೊದಲ ಪುಟದಿಂದ) ಅನೀಶ್, ರಾಧಾಕೃಷ್ಣ, ಶ್ರೀನಿಲ್ ಹಾಗೂ ಪ್ರಭಾಕರ್ ಎಂಬ ನಾಲ್ಕು ಮಂದಿಯನ್ನು ತನಿಖೆಗೊಳ ಪಡಿಸಿದಾಗ ಇವರುಗಳು ಮೂಲತಃ ಕೇರಳದ ನಿವಾಸಿಗಳಾಗಿದ್ದು ಮೂರು ತಿಂಗಳ ಹಿಂದೆ ಅಮ್ಮತ್ತಿ ಒಂಟಿಅಂಗಡಿಯ ಸುತ್ತಮುತ್ತ ಕಾಫಿ ತೋಟದಲ್ಲಿ ಕರಿಮೆಣಸು ಕುಯ್ಯಲು ಕಾರ್ಮಿಕರಾಗಿ ಬಂದಿದ್ದು ಕೊರೊನಾ ವೈರಸ್ ಲಾಕ್‍ಡೌನ್ ನಿಮಿತ್ತ ದುಡಿಯುತ್ತಿದ್ದ ಕಾಫಿ ತೋಟದಲ್ಲಿಯೇ ಆಶ್ರಯ ಪಡೆದಿದ್ದರು. ಕಾಲ್ನಡಿಗೆಯಲ್ಲಿ ಕಾಡಿನ ಮೂಲಕ ಕೇರಳ ಗಡಿಯನ್ನು ದಾಟಬಹುದು ಎಂದು ಸ್ಥಳೀಯ ಕೆಲವು ಕಾರ್ಮಿಕರು ಸಲಹೆ ನೀಡಿದ್ದರಿಂದ ಈ ನಾಲ್ವರು ಕಾಲ್ನಡಿಗೆಯಲ್ಲಿ ಕೇರಳಕ್ಕೆ ಹೋಗುವ ನಿರ್ಧಾರ ಮಾಡಿ ಇಂದು ಕೇರಳಕ್ಕೆ ಹೋಗುತ್ತಿದ್ದಾಗ ಅರಬಿತಿಟ್ಟು ಹಾಗೂ ಮಾಂಟ್ರೆ ಅರಣ್ಯ ರಕ್ಷಕರ ಕೈಗೆÉ ಸಿಕ್ಕಿ ಬಿದ್ದಿದ್ದಾರೆ.
ಅರಣ್ಯ ರಕ್ಷಕರು ಅರಣ್ಯ ಇಲಾಖೆಗೆ ನೀಡಿದ ಸೂಚನೆ ಮೇರೆ ಇಂದು ಬೆಳಿಗ್ಗೆ ಡಿ.ಸಿ.ಎಫ್. ಶಿವಶಂಕರ್, ಎ.ಸಿ.ಎಫ್ ಕೊಣೇರಿರ ರೋಶಿನಿ ರೇಂಜರ್ ಅರುಣ್ ಕುಮಾರ್ ಸಿಬ್ಬಂದಿ ತೆರಳಿ ಮಹಜರು ನಡೆಸಿ ಇಲ್ಲಿನ ಅರಣ್ಯ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.
ಇಂದು ಬೆಳಿಗ್ಗೆ 6 ಗಂಟೆಯ ಸಮಯದಲ್ಲಿ ಚೆಂಬೆಬೆಳ್ಳೂರು ಗ್ರಾಮದಿಂದ ಆಟೋ ರಿಕ್ಷಾದಲ್ಲಿ ವೀರಾಜಪೇಟೆಗೆ ಬಂದ ನಾಲ್ಕು ಮಂದಿ ಪೆರುಂಬಾಡಿಯಿಂದ ಅರಣ್ಯದ ಮೂಲಕ ಕಾಲ್ನಡಿಗೆಯಲ್ಲಿ ಬೆಳಿಗ್ಗೆ ಸುಮಾರು 11ಗಂಟೆ ವೇಳೆಗೆ ಅರಬ್ಬಿತಿಟ್ಟು ತಲುಪಿ ಅರಣ್ಯ ರಕ್ಷಕರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಅರಣ್ಯ ಅಧಿಕಾರಿಗಳ ನಿರ್ದೇಶನದಂತೆ ಎಲ್ಲರನ್ನು ವೀರಾಜಪೇಟೆಗೆ ಕರೆದುಕೊಂಡು ಬರಲಾಗಿದೆ.
ಹೋಮ್ ಕ್ವಾರಂಟೈನ್‍ನಲ್ಲಿ 35 ಮಂದಿ
ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟದಲ್ಲಿ ಬಿಗಿ ಬಂದೋಬಸ್ತ್ ಇದ್ದರೂ ಕೊಡಗಿನಿಂದ ಕೇರಳಕ್ಕೆ ಕಾಲ್ನಡಿಗೆಯಲ್ಲಿ ಅಕ್ರಮವಾಗಿ ತೆರಳಿದ ಕೇರಳದ ವಲಸೆ ಕಾರ್ಮಿಕರುಗಳನ್ನು ಕೇರಳ ಸರಕಾರದ ಅಧಿಕಾರಿಗಳು ಪೆರಾವೂರಿನಲ್ಲಿ ಹೋಮ್ ಕ್ವಾರಂಟೈನ್‍ನಲ್ಲಿಟ್ಟಿದ್ದಾರೆ. ಕೊಡಗಿನ ಎಲ್ಲಾ ಗೇಟ್‍ಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಿ ಬಿಗಿ ಬಂದೋಬಸ್ತ್‍ನಲ್ಲಿದ್ದರೂ ಈ 35 ಮಂದಿ ಹೇಗೆ ಗಡಿಯನ್ನು ದಾಟಿದ್ದಾರೆ ಎಂಬ ಪ್ರಶ್ನೆ ಈಗ ಸವಾಲಾಗಿದೆ.
ಪೆರಾವೂರು ಹೋಂ ಕ್ವಾರಂಟೈನ್‍ನ ದಾಖಲೆಗಳ ಪ್ರಕಾರ ಸುಮಾರು 8 ದಿನಗಳಿಗೂ ಮೊದಲು 10 ಮಂದಿಯ ತಂಡ, ನಂತರ 9, ಇದನ್ನು ಹಿಂಭಾಲಿಸಿ 8 ಹಾಗೂ ಕೊನೆಗೆ ಪುನಹ 8 ಮಂದಿಯ ತಂಡ ತೆರಳಿದೆ. ಇವರುಗಳನ್ನು ಹಿಂಬಾಲಿಸಿದ 4ಮಂದಿಯ ತಂಡವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಪೊಲೀಸ್‍ವಿಶೇಷ ಗುಪ್ತಚರ ದಳದ ಪ್ರಕಾರದ ತನಿಖೆಯಿಂದ ಈವರೆಗೆ 35 ಮಂದಿ ಕಾರ್ಮಿಕರುಗಳು ಕೊಡಗಿನಿಂದ ಕಾಲ್ನಡಿಗೆಯಲ್ಲಿ ಕೇರಳದ ಗಡಿ ದಾಟಿರುವುದು ಗೊತ್ತಾಗಿದೆ.