ಮಡಿಕೇರಿ, ಏ. 25: ಸಮೀಪದ ಲೆಕ್ಕೆಹನಲು ಗ್ರಾಮದ ಕಿರುಬಿಳಾಹ ಸುಬ್ಬಣ್ಣ ಅವರ ಮತ್ತೊಂದು ಹಸುವನ್ನು ಚಿರತೆ ಬಲಿಪಡೆದಿದೆ. ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಎಮ್ಮೆಯ ಕಳೇಬರ ಪತ್ತೆಯಾದಂತೆ ಅದೇ ಯಸಳೂರು ಅರಣ್ಯದಲ್ಲಿ ಕಾಣೆಯಾಗಿದ್ದ ಹಸುವಿನ ಕಳೇಬರವೂ ಕಂಡುಬಂದಿದೆ. ಚಿರತೆಯು ಹಸುವನ್ನು ಎಳೆದೊಯ್ದು ಸ್ವಲ್ಪ ಭಾಗ ತಿಂದಿದೆ.

ರೂ. 25 ಸಾವಿರ ಮೌಲ್ಯದ ಎಮ್ಮೆಯನ್ನು ಕಳೆದುಕೊಂಡ ಬೆನ್ನಲ್ಲೆ ರೂ. 35 ಸಾವಿರ ಮೌಲ್ಯದ ಹಸುವನ್ನೂ ಕಳೆದುಕೊಂಡಿರುವ ಸುಬ್ಬಣ್ಣ ತಮಗಾದ ನಷ್ಟದ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ. ಯಸಳೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡಬಿಳಾಹ, ಕಿರುಬಿಳಾಹ ಹಾಗೂ ಲೆಕ್ಕೆಹನಲು ಗ್ರಾಮಗಳ ಕಾಫಿ ತೋಟಗಳಲ್ಲಿ ಚಿರತೆ ಸುಳಿದಾಡುತ್ತಿರುವ ಬಗ್ಗೆ ಕೃಷಿಕರು, ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಚಿರತೆಯ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿರುತ್ತಾರೆ.