ಮಡಿಕೇರಿ, ಏ. 24: ಭಾರತದೆಲ್ಲೆಡೆ ಕೊರೊನಾ ವಿರುದ್ಧ ಲಾಕ್‍ಡೌನ್ ನಡುವೆ; ಕೊಡಗು ಜಿಲ್ಲೆಯಲ್ಲಿ ವಾರದ ಮೂರು ದಿವಸ ಅಗತ್ಯ ವಸ್ತುಗಳ ಖರೀದಿಗೆ; ಜಿಲ್ಲಾಡಳಿತ ನಿರ್ಬಂಧ ಸಡಿಲಿಸಿರುವ ಸಂದರ್ಭವನ್ನು ಬಳಸಿಕೊಂಡಿರುವ ವ್ಯಾಪಾರಿಗಳು ಮತ್ತು ಗ್ರಾಹಕರು ಇಂದು ಮಳೆಯ ಆತಂಕದೊಂದಿಗೆ ವ್ಯಾಪಾರ ವಹಿವಾಟು ನಡೆಸಿದ ದೃಶ್ಯ ಎದುರಾಯಿತು.ನಿನ್ನೆ ಸಂಜೆಗತ್ತಲೆ ನಡುವೆ ಕೊಡಗಿನ ಹಲವೆಡೆ ಮಳೆಯೊಂದಿಗೆ, ಇಂದು ಬೆಳಿಗ್ಗೆ 6 ಗಂಟೆಯಿಂದ ಹತ್ತು ಗಂಟೆಯ ತನಕ ಬಿಟ್ಟು ಬಿಟ್ಟು ಮಳೆ ಸುರಿಯತೊಡಗಿತು. ಜಿಲ್ಲಾ ಕೇಂದ್ರ ಮಡಿಕೇರಿ ಸಹಿತ ಅನೇಕ ಕಡೆಗಳಲ್ಲಿ ಮಡಿಕೇರಿ, ಏ. 24: ಭಾರತದೆಲ್ಲೆಡೆ ಕೊರೊನಾ ವಿರುದ್ಧ ಲಾಕ್‍ಡೌನ್ ನಡುವೆ; ಕೊಡಗು ಜಿಲ್ಲೆಯಲ್ಲಿ ವಾರದ ಮೂರು ದಿವಸ ಅಗತ್ಯ ವಸ್ತುಗಳ ಖರೀದಿಗೆ; ಜಿಲ್ಲಾಡಳಿತ ನಿರ್ಬಂಧ ಸಡಿಲಿಸಿರುವ ಸಂದರ್ಭವನ್ನು ಬಳಸಿಕೊಂಡಿರುವ ವ್ಯಾಪಾರಿಗಳು ಮತ್ತು ಗ್ರಾಹಕರು ಇಂದು ಮಳೆಯ ಆತಂಕದೊಂದಿಗೆ ವ್ಯಾಪಾರ ವಹಿವಾಟು ನಡೆಸಿದ ದೃಶ್ಯ ಎದುರಾಯಿತು.ನಿನ್ನೆ ಸಂಜೆಗತ್ತಲೆ ನಡುವೆ ಕೊಡಗಿನ ಹಲವೆಡೆ ಮಳೆಯೊಂದಿಗೆ, ಇಂದು ಬೆಳಿಗ್ಗೆ 6 ಗಂಟೆಯಿಂದ ಹತ್ತು ಗಂಟೆಯ ತನಕ ಬಿಟ್ಟು ಬಿಟ್ಟು ಮಳೆ ಸುರಿಯತೊಡಗಿತು. ಜಿಲ್ಲಾ ಕೇಂದ್ರ ಮಡಿಕೇರಿ ಸಹಿತ ಅನೇಕ ಕಡೆಗಳಲ್ಲಿ ಡೌನ್ ಹೇರಿದ ಪರಿಣಾಮವಾಗಿ ಸ್ಥಗಿತಗೊಂಡ ಕಾಮಗಾರಿ ಪುನಃ ಪ್ರಾರಂಭ ಮಾಡಲು ಲಾಕ್ ಡೌನ್ ಸಡಿಲಗೊಳಿಸಿ ಸರಕಾರ ಆದೇಶ ಹೊರಡಿಸಿದರ ಪರಿಣಾಮ ಇದೀಗ ಕಾಮಗಾರಿಗಳು ಮತ್ತೆ ಪ್ರಾರಂಭಗೊಂಡಿದೆ.ತೀವ್ರ ಹದಗೆಟ್ಟ ಭಾಗಮಂಡಲ- ಕರಿಕೆ ಅಂತರ್ ರಾಜ್ಯ ಹೆದ್ದಾರಿ ಕಾಮಗಾರಿ ಮಾರ್ಚ್ ನಲ್ಲಿ ಆರಂಭಿಸಿದ್ದು ದಿಡೀರ್ ಲಾಕ್ ಡೌನ್ ಪರಿಣಾಮ ಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದೀಗ ತ್ವರಿತ ಗತಿಯಲ್ಲಿ ಡಾಮರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಅಲ್ಲದೆ ಇನ್ನುಳಿದ ಕಾಮಗಾರಿಗಳ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಮ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸುಂಟಿಕೊಪ್ಪದಲ್ಲಿ ಗ್ರಾಹಕರ ಕೊರತೆ : ಪವಿತ್ರ ರಂಜಾನ್ ಉಪವಾಸ ವ್ರತಾಚರಣೆ ಶುಕ್ರವಾರದಿಂದ ಆರಂಭಗೊಂಡಿದ್ದು, ಕೊರೊನಾ ಲಾಕ್‍ಡೌನ್ ಹಾಗೂ ಮಳೆಯ ಆರ್ಭಟದಿಂದ ತರಕಾರಿ ಆಹಾರ ಪದಾರ್ಥ ಖರೀದಿಸುವವರ ಸಂಖ್ಯೆ ಇಳಿಮುಖಗೊಂಡಿತ್ತು.

ಮಾಮೂಲಿಯಾಗಿ ರಂಜಾನ್ ಆರಂಭದ ದಿನ ಸುಂಟಿಕೊಪ್ಪ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಜನರ ನೂಕು ನುಗ್ಗಲು, ಹಸಿಮೀನು, ಕೋಳಿ, ಕುರಿ, ಹಣ್ಣು - ಹಂಪಲು ಅಂಗಡಿಗಳಲ್ಲಿ ವ್ಯಾಪಾರಸ್ಥರು ಮುಗಿಬೀಳುತ್ತಿದ್ದರು.

ಬೆಳಗ್ಗಿನಿಂದಲೇ ಮಳೆಯ ಆರ್ಭಟವಿದ್ದು ಗ್ರಾಮೀಣ ಪ್ರದೇಶದ ಜನರು ಆಹಾರ, ತರಕಾರಿ ಹಾಗೂ ಹಣ್ಣು - ಹಂಪಲು

(ಮೊದಲ ಪುಟದಿಂದ) ಸಾಮಗ್ರಿಗಳನ್ನು ಖರೀದಿಸಲು ಜನರು ವಿರಳವಾಗಿದ್ದರು. ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿರುವುದು ಗ್ರಾಹಕರಿಗೆ ಬಿಸಿತಟ್ಟಿತು. ವರ್ಕ್‍ಶಾಪ್, ಮೊಬೈಲ್, ಕೃಷಿಕರಿಗೆ ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಅಂಗಡಿ, ಕಾಫಿ ಕರಿಮೆಣಸು ಕೇಂದ್ರಗಳು ಲಾಕ್‍ಡೌನ್ ಸಡಿಲಿಕೆಯಿಂದ ವ್ಯಾಪಾರ ವಹಿವಾಟು ನಡೆಸಿದವು.

ಕೈಕೈ ಮಿಲಾಯಿಸಿದ ವ್ಯಾಪಾರಿಗಳು

ನಾಪೋಕ್ಲು : ಬೆಳಗ್ಗಿನಿಂದಲೇ ಮಳೆ ಸುರಿಯುತ್ತಿದ್ದುದರಿಂದ ಜನರ ಓಡಾಟ ಕಡಿಮೆಯಾಗಿತ್ತು. ಪಟ್ಟಣದ ಕೋಳಿ ಮತ್ತು ಮಾಂಸದ ಅಂಗಡಿಗಳಲ್ಲಿ ತರಕಾರಿ ಮತ್ತು ಹಣ್ಣು ವ್ಯಾಪಾರ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ವ್ಯಾಪಾರಿಗಳು ಅಧಿಕ ವಸೂಲಾತಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದು ಅಧಿಕ ಬೆಲೆಗೆ ಮಾರಾಟ ಮಾಡುವ ಬಗ್ಗೆ ಆರೋಪ ಪ್ರತ್ಯಾರೋಪಗಳು ಏರ್ಪಟ್ಟು ಕೈಕೈ ಮಿಲಾಯಿಸಿದ ಘಟನೆಂiÀೂ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಹಾಗೂ ಪಿಡಿಒ ಚೋಂದಕ್ಕಿ ಈ ಬಗ್ಗೆ ಪ್ರತಿಕ್ರಿಯಿಸಿ ನಾಪೋಕ್ಲುವಿನಲ್ಲಿ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜನ ಜಂಗುಳಿ

ಮಳೆಯ ಕಾರಣದಿಂದ ಅಗತ್ಯ ವಸ್ತುಗಳ ಖರೀದಿಗೆ ಜನ ಸಾಮಾನ್ಯರು ಹಿಂದೇಟು ಹಾಕಬಹುದು ಎನ್ನುವ ಊಹೆ ನಾಪೆÇೀಕ್ಲುವಿನಲ್ಲಿ ಹುಸಿಯಾಗಿದೆ. ಸುರಿವ ಮಳೆಯ ನಡುವೆಯೂ ಹೆಚ್ಚಿನ ಜನ ಸಾಮಗ್ರಿ ಖರೀದಿಗೆ ಆಗಮಿಸಿದ್ದರು. ಪಟ್ಟಣದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂತು. ಪೆÇಲೀಸರು ಅಂಗಡಿ ಮುಂಗಟ್ಟುಗಳು ಮತ್ತು ಬ್ಯಾಂಕ್‍ಗಳ ಮುಂದೆ ನಿಂತಿರುವ ಜನರ ನಡುವೆ ಅಂತರ ಕಾಯ್ದುಕೊಳ್ಳುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.

ಸೋಮವಾರಪೇಟೆ: ಲಾಕ್‍ಡೌನ್ ನಿಯಮಗಳಲ್ಲಿ ಕೆಲವೊಂದು ಸಡಿಲಿಕೆ ನೀಡಿರುವದರಿಂದ ಶುಕ್ರವಾರದಂದು ಪಟ್ಟಣದಲ್ಲಿ ಹೆಚ್ಚಿನ ವಾಹನ-ಜನಸಂಚಾರ ಕಂಡುಬಂತು. ದಿನಸಿ ಹಾಗೂ ತರಕಾರಿ ಖರೀದಿಸಲು ಪಟ್ಟಣಕ್ಕೆ ಆಗಮಿಸಿದ ಸಾರ್ವಜನಿಕರು, ಇತರ ಅಗತ್ಯ ಕೆಲಸ ಕಾರ್ಯಗಳಲ್ಲೂ ತೊಡಗಿಸಿಕೊಂಡರು. ಪಟ್ಟಣದ ಕೆಲವೊಂದು ವರ್ಕ್‍ಶಾಪ್‍ಗಳ ಹೊರಭಾಗದಲ್ಲೇ ಸಣ್ಣಪುಟ್ಟ ರಿಪೇರಿ ಕಾರ್ಯಗಳು ನಡೆದವು. ಇದರೊಂದಿಗೆ ಗೊಬ್ಬರ ಖರೀದಿ, ಕೃಷಿ ಯಂತ್ರೋಪಕರಣ ಖರೀದಿ ಮತ್ತು ದುರಸ್ತಿ, ಹಾರ್ಡ್‍ವೇರ್ ಅಂಗಡಿಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು.

ಪಟ್ಟಣದ ಮಾರುಕಟ್ಟೆಯಲ್ಲಿರುವ ಮೀನು-ಮಾಂಸದ ಅಂಗಡಿಗಳೂ ಸೇರಿದಂತೆ ವಿವೇಕಾನಂದ ವೃತ್ತದಲ್ಲಿರುವ ಕುರಿ, ಕೋಳಿ, ಮೀನು, ಹಂದಿ ಮಾಂಸ ಮಾರಾಟದ ಅಂಗಡಿಗಳ ಎದುರು ಸಾರ್ವಜನಿಕರು ಸಾಲಿನಲ್ಲಿ ತೆರಳಿ ಮೀನು-ಮಾಂಸ ಖರೀದಿಸಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಪುಸ್ತಕ ಮಳಿಗೆ, ಮೊಬೈಲ್ ರಿಚಾರ್ಜ್ ಅಂಗಡಿಗಳು, ಫ್ಲೋರ್ ಮಿಲ್‍ಗಳಲ್ಲಿ ಹೆಚ್ಚಿನ ಜನರು ಕಂಡುಬಂದರು. ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಆಗಮಿಸಿದ ಮಂದಿ ಅಕ್ಕಿ, ಸಾಂಬಾರ ಪದಾರ್ಥಗಳನ್ನು ಹುಡಿ ಮಾಡಿಸಿಕೊಳ್ಳಲು ಫ್ಲೋರ್ ಮಿಲ್‍ಗಳ ಎದುರು ಸಾಲುಗಟ್ಟಿ ನಿಂತಿದ್ದರು.

ಸಂತೆಗೆ ಅವಕಾಶ ಕಲ್ಪಿಸಿರುವ ಇಲ್ಲಿನ ಆರ್‍ಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಹೆಚ್ಚಿನ ಗ್ರಾಹಕರು ಕಂಡುಬರಲಿಲ್ಲ. ಕಳೆದ ಸೋಮವಾರ ಮತ್ತು ಬುಧವಾರ ಸಂತೆಗೆ ಆಗಮಿಸಿ ದಿನಸಿ ಹಾಗೂ ತರಕಾರಿಗಳನ್ನು ಖರೀದಿಸಿದ್ದರಿಂದ ಶುಕ್ರವಾರದ ಸಂತೆಗೆ ಗ್ರಾಹಕರು ಅಷ್ಟಾಗಿ ಆಗಮಿಸಲಿಲ್ಲ.

ಪಟ್ಟಣದ ಅಂಗಡಿಗಳಿಂದ ದಿನಸಿ ಖರೀದಿಸಿ ಅಲ್ಲಲ್ಲಿ ನಿಂತಿದ್ದ ಸಾರ್ವಜನಿಕರನ್ನು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ಗದರಿಸಿ ಕಳುಹಿಸುತ್ತಿದ್ದರು. ವ್ಯಾಪಾರ ವಹಿವಾಟು ಮುಗಿದ ತಕ್ಷಣ ಮನೆಗಳಿಗೆ ತೆರಳದೇ ಪಟ್ಟಣದಲ್ಲಿ ಸಮಯ ಕಳೆಯುತ್ತಿದ್ದ ಮಂದಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಲಾಕ್‍ಡೌನ್ ಸಡಿಲಿಕೆಯ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಮಧ್ಯಾಹ್ನ 12 ಗಂಟೆಯ ವೇಳೆಗೆ ಸೋಮವಾರಪೇಟೆ ಪಟ್ಟಣ ಸಂಪೂರ್ಣ ಸ್ತಬ್ಧಗೊಂಡಿತು.