ಸೋಮವಾರಪೇಟೆ, ಏ. 25: ಕೊರೊನಾ ಸೋಂಕು ಹಿನ್ನೆಲೆ ಲಾಕ್‍ಡೌನ್ ಇರುವದರಿಂದ ಹಲವಷ್ಟು ಮಂದಿ ಸಂಕಷ್ಟದಲ್ಲಿದ್ದು, ಇಂತಹವರ ನೆರವಿಗೆ ಧಾವಿಸುವ ದಾನಿಗಳು ಪಟ್ಟಣ ಪಂಚಾಯಿತಿ ಮೂಲಕ ನೆರವು ಒದಗಿಸ ಬಹುದು ಎಂದು ಮುಖ್ಯಾಧಿಕಾರಿ ರಮೇಶ್ ಮನವಿ ಮಾಡಿದ್ದಾರೆ. ಕೂಲಿಕಾರ್ಮಿಕರು, ಬಡ ಮಂದಿಗೆ ಸಹಾಯ ಹಸ್ತ ನೀಡಲು ಇಚ್ಛಿಸುವ ದಾನಿಗಳು ಅಕ್ಕಿ, ಬೇಳೆ, ಗೋದಿ ಹಿಟ್ಟು, ಎಣ್ಣೆ, ಸಕ್ಕರೆ, ಉಪ್ಪು ಸೇರಿದಂತೆ ಇತರ ಸಾಮಗ್ರಿಗಳನ್ನು ಪಟ್ಟಣ ಪಂಚಾಯಿತಿ ಮೂಲಕ ವಿತರಿಸಬಹುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.