ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿತರ ಚೀಟಿ ರಹಿತ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ 28 ಅರ್ಹ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ನೆಲ್ಲಿಹುದಿಕೇರಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿತರಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ, ಸದಸ್ಯರುಗಳಾದ ಅಫ್ಸಲ್, ಮೈನ, ಬಿಂದು ಹಾಗೂ ಪಿ.ಡಿ.ಓ. ಅನಿಲ್ ಕುಮಾರ್ ಹಾಜರಿದ್ದರು.ಪಾಲಿಬೆಟ್ಟ: ಪಾಲಿಬೆಟ್ಟದಲ್ಲಿ ಸಂಕಷ್ಟದಲ್ಲಿರುವ ಹಾವೇರಿ ಜಿಲ್ಲೆಯ ಕಾರ್ಮಿಕರಿಗೆ ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಆಹಾರ ಕಿಟ್ ವಿತರಿಸಲಾಯಿತು.

ಮಾಧ್ಯಮ ಸ್ಪಂದನ ತಂಡದ ಚನ್ನನಾಯಕ್, ಪುತ್ತಂ ಪ್ರದೀಪ್ ಪ್ರಯತ್ನದ ಫಲವಾಗಿ 7 ಕುಟುಂಬಗಳಿಗೆ (18 ಜನ) ಕಿಟ್ ನೀಡಲಾಯಿತು. ಬೋಧಸ್ವರೂಪಾನಂದ ಮಹಾರಾಜ್ ಕಿಟ್ ವಿತರಿಸಿದರು.ಸೋಮವಾರಪೇಟೆ: ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜಾನಪದ ಕಲಾವಿದರಿಗೆ, ಕೊಡಗು ಜಿಲ್ಲಾ ಜಾನಪದ ಪರಿಷತ್ ಮೂಲಕ ಆಹಾರ ಸಾಮಗ್ರಿಯ ಕಿಟ್‍ಗಳನ್ನು ವಿತರಿಸಲಾಯಿತು.

ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ಜಾನಪದ ಕಲಾವಿದರಿಗೆ, ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರುಳೀಧರ್, ಕಾರ್ಯದರ್ಶಿ ಎಂ.ಎ. ರುಬೀನಾ, ಉಪಾಧ್ಯಕ್ಷ ನ.ಲ. ವಿಜಯ, ನಿರ್ದೇಶಕ ಪ್ರಕಾಶ್ ಅವರುಗಳ ಮೂಲಕ ಆಹಾರ ಸಾಮಗ್ರಿಯ ಕಿಟ್ ವಿತರಿಸಲಾಯಿತು.ಗೋಣಿಕೊಪ್ಪ: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಪೊನ್ನಂಪೇಟೆ ಆಟೋ ಚಾಲಕರಿಗೆ ದಿನಸಿ ಪದಾರ್ಥಗಳ ಕಿಟ್ ವಿತರಿಸಲಾಯಿತು.

ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧ ಸ್ವರೂಪಾನಂದ ಸ್ವಾಮೀಜಿ ಅವರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಆಟೋ ಚಾಲಕರು ಕುಟುಂಬ ನಿರ್ವಹಣೆ ಮಾಡಲು ಬಹಳಷ್ಟು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಬೇಕಾದ ವ್ಯವಸ್ಥೆ ನಿರ್ಮಾಣವಾಗಿದೆ. ಈ ಕಾರಣದಿಂದ ಅಲ್ಪ ಪ್ರಮಾಣದಲ್ಲಿ ಆತ್ಮಸ್ಥೈರ್ಯ ತುಂಬಲು ಕಿಟ್‍ನ್ನು ವಿತರಿಸುವುದಾಗಿ ತಿಳಿಸಿದರು.ವೀರಾಜಪೇಟೆ: ನಗರದ ಶಾಫಿ ಜುಮಾ ಮಸೀದಿ ವತಿಯಿಂದ 20 ಮಂದಿ ಗೃಹರಕ್ಷಕ ಸಿಬ್ಬಂದಿಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಮಸೀದಿ ಕಾರ್ಯದರ್ಶಿ ಸಿ.ಹೆಚ್. ಅಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಎ. ರಜಾಕ್, ಅಲ್ತಾಫ್ ಝುಕಾಕೋ, ಹಸನ್ ಮನ್ನಾ, ಆತಿಫ್ ಮನ್ನಾ, ಮಾಣಿ ರಫೀಖ್, ಅಬ್ದುಲ್ ರವೂಫ್, ಮುಜೀಬುರ್ರಹ್ಮಾನ್ ಪಾಲ್ಗೊಂಡಿದ್ದರು. ಗೃಹರಕ್ಷಕ ದಳದ ತಿಮ್ಮಯ್ಯ ಶುಭಹಾರೈಸಿ ಮಾತನಾಡಿದರು.ಗೋಣಿಕೊಪ್ಪ: ಶ್ರೀ ಪರಮ ಜ್ಯೋತಿ ಸೇವಾ ಸಮಿತಿ ಮತ್ತು ಶ್ರೀ ಅಮ್ಮ ಭಗವಾನ್ ಫೌಂಡೇಶನ್ ಗೋಣಿಕೊಪ್ಪ ಶಾಖೆ ಇವರ ವತಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಉಚಿತ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.

ಗೋಣಿಕೊಪ್ಪ ಈರಣ್ಣ ಕಾಲೋನಿಯಲ್ಲಿರುವ ಅಮ್ಮ ಭಗವಾನ್ ಪ್ರಾರ್ಥನಾ ಮಂದಿರದಲ್ಲಿ ಆಟೋ ಚಾಲಕರಿಗೆ ದಿನಸಿ ಪದಾರ್ಥಗಳನ್ನು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಮತ್ತು ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರ ನೇತೃತ್ವದಲ್ಲಿ ಆರ್ಥಿಕವಾಗಿ ಕಂಗೆಟ್ಟಿರುವ ಆಟೋ ಚಾಲಕರನ್ನು ಗುರುತಿಸಿ ದಿನಸಿ ಪದಾರ್ಥಗಳನ್ನು ನೀಡಲಾಯಿತು. ಸುಮಾರು 70ಕ್ಕೂ ಹೆಚ್ಚು ಫಲಾನುಭವಿಗಳು ಕಿಟ್ ಪಡೆದುಕೊಂಡರು.

ಜಾಂಬವ ಯುವ ಸೇನೆಯ ಜಿಲ್ಲಾಧ್ಯಕ್ಷ ಸತೀಶ ಸಿಂಗಿ, ಅಮ್ಮ ಭಗವಾನ್ ಮತ್ತು ಶ್ರೀ ಪರಮ ಜ್ಯೋತಿ ಸೇವಾಮಂಡಲಿಯ ಪದಾಧಿಕಾರಿಗಳಾದ ಲತಾಜಿ, ರಾಣಿಜಿ, ನವೀನ್ ಜಿ, ಇಂದಿರಾಜಿ, ಕಾವ್ಯ ಜಿ, ಪೂಣಚ್ಚ ಜಿ, ಇವರುಗಳು ಆಟೋ ಚಾಲಕರ ಪರಿಸ್ಥಿತಿಯನ್ನು ಮನಗಂಡು ಆಹಾರ ಸಾಮಗ್ರಿಗಳ ವಿತರಣೆಗೆ ಕ್ರಮ ಕೈಗೊಂಡರು. ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ ಹಾಜರಿದ್ದರು.