ಮಡಿಕೇರಿ, ಏ. 25: ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿಯಾಗಿ ಮಹಿಳಾ ಅಧಿಕಾರಿ ಅಂತಿಮ ಅವರು ನೇಮಕಗೊಂಡಿದ್ದಾರೆ.
ಮೂಲತಃ ಶಿವಮೊಗ್ಗ ದವರಾದ ಇವರು ಇದುವರೆಗೆ ಚಾಮರಾಜನಗರದಲ್ಲಿ ಪ್ರೊಬೆಷÀನರಿ ಸೇವೆಯಲ್ಲಿದ್ದು, ಇದೀಗ ಕೊಡಗು ಜಿಲ್ಲಾ ಕೇಂದ್ರಕ್ಕೆ ನಿಯುಕ್ತಿಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ತನಕ ಸೇವೆಯಲ್ಲಿದ್ದ ಠಾಣಾಧಿಕಾರಿ ಸದಾಶಿವ ಅವರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಅಂತೆಯೇ ನಾಪೋಕ್ಲು ಠಾಣಾಧಿಕಾರಿಯಾಗಿದ್ದ ಮಂಚಯ್ಯ ಅವರು ಶ್ರೀಮಂಗಲಕ್ಕೆ ವರ್ಗಾವಣೆಗೊಂಡಿದ್ದಾರೆ. ತೆರವಾದ ಸ್ಥಾನಕ್ಕೆ ಮೈಸೂರು ಮೂಲದ ಆರ್. ಕಿರಣ್ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಪ್ರೊಬೆಷನರಿ ಅವಧಿಯಲ್ಲಿ ಹೊಳೆನರಸೀಪುರದಲ್ಲಿ ಸೇವೆಯಲ್ಲಿದ್ದರು.
ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಪಿ. ಮೋಹನ್ ರಾಜ್ ಅಧಿಕಾರ ವಹಿಸಿಕೊಂಡಿದ್ದಾರೆ. ಸಬ್ಇನ್ಸ್ಪೆಕ್ಟರ್ ಹೆಚ್.ಎಸ್. ಬೋಜಪ್ಪ ಅವರು ವೀರಾಜಪೇಟೆಗೆ ವರ್ಗಾವಣೆ ಗೊಂಡಿದ್ದಾರೆ.
ಮೈಸೂರು ಜಿಲ್ಲೆಯವರಾದ ಪಿ. ಮೋಹನ್ ರಾಜ್ ಕೊಡಗು ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರೊಬೆಷನರಿ ಸೇವೆ ಸಲ್ಲಿಸಿದ್ದಾರೆ. ನೂತನ ಠಾಣಾಧಿಕಾರಿಗಳಿಗೆ ಎಸ್ಪಿ ಸುಮನ್ ಡಿ.ಪಿ. ಅಧಿಕಾರಗಳನ್ನು ವಹಿಸಿದ್ದಾರೆ.