ಸೋಮವಾರಪೇಟೆ, ಏ.25: ಕೊಡವಾಮೆರ ಕೊಂಡಾಟ ಕೂಟದಿಂದ ಕೂಟದ ಸದಸ್ಯೆ, ರಾಷ್ಟ್ರೀಯ ಯೋಗ ತರಬೇತುದಾರರಾದ ಪೆÇೀಡಮಾಡ ಭವಾನಿ ನಾಣಯ್ಯ ಅವರ ಹುಟ್ಟು ಹಬ್ಬವನ್ನು ವಾಟ್ಸಾಪ್ ಮೂಲಕ ವಿಚಾರ ಮಂಡನಾ ಸ್ಪರ್ಧೆಯೊಂದಿಗೆ ವಿನೂತನವಾಗಿ ಆಚರಿಸಲಾಯಿತು.

‘ನಾಡ ಬಾಲ್ಯ’ ಎನ್ನುವ ವಿಚಾರದಲ್ಲಿ ಸದಸ್ಯರಿಗೆ 26 ಸಾಲುಗಳಿಗೆ ಮೀರದಂತೆ ವಾಟ್ಸಾಪ್ ನಲ್ಲಿ ತಮ್ಮ ಬಾಲ್ಯದ ಅನುಭವವನ್ನು ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ತೀರ್ಪುಗಾರರಾಗಿ ಹಿರಿಯ ಸಾಹಿತಿ ಮೂವೇರ ರೇಖಾ ಪ್ರಕಾಶ್, ಸಾಹಿತಿ ಮತ್ತು ಶಿಕ್ಷಕಿ ಅಪ್ಪಚಟ್ಟೋಳಂಡ ವನು ವಸಂತ, ಗಾಯಕ ಮಾಳೇಟಿರ ಅಜಿತ್ ಪೂವಣ್ಣ ಅವರು ಕಾರ್ಯನಿರ್ವಹಿಸಿದರು.

ಸ್ಪರ್ಧೆಯಲ್ಲಿ ಬೊಳ್ಳೇರ ಸುಮನ್ ತಮ್ಮಯ್ಯ ಪ್ರಥಮ, ಜಮ್ಮಡ ಮೋನ ಭೀಮಯ್ಯ ದ್ವಿತೀಯ, ಕಾಣತಂಡ ವಿವೇಕ್ ಅಯ್ಯಪ್ಪ ತೃತೀಯ ಬಹುಮಾನ ಪಡೆದರು.

ಕೇವಲ ಶುಭಾಷಯ ಕೋರುವ ಮೂಲಕ ಜನ್ಮದಿನ ಆಚರಿಸುವ ಬದಲಿಗೆ, ಲಾಕ್‍ಡೌನ್ ಸಂದರ್ಭದಲ್ಲಿ ಸಾಹಿತ್ಯ ಚಟುವಟಿಕೆಯ ಮೂಲಕ ಕೂಟದ ಸದಸ್ಯೆಯ ಜನ್ಮ ದಿನ ಆಚರಿಸಿದ್ದು ವಿಶೇಷವಾಗಿತ್ತು.