ಗೋಣಿಕೊಪ್ಪಲು, ಏ.25: ಕಾಡಾನೆ ದಾಳಿಗೆ ಒಳಗಾಗಿ ತನ್ನ ಬಲಗಾಲನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಾಯಮುಡಿ ಗ್ರಾಮದ ಪರಿಶಿಷ್ಟ ವರ್ಗದ ಕಾವಾಲ ಎಂಬ ಕಾರ್ಮಿಕನ್ನು ರೈತ ಸಂಘದ ಪದಾಧಿಕಾರಿಗಳು ಕಾವಾಲನ ಮನೆಗೆ ತಲುಪಿಸುವ ಮೂಲಕ ಮಾನವೀಯತೆ ತೋರಿದ್ದಾರೆ.

ಕಾಲಿಲ್ಲದೆ ನಡೆದಾಡಲು ತೊಂದರೆಯಲ್ಲಿದ್ದ ಕಾವಾಲಿನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಈತನ ಅವಶ್ಯಕತೆ ಇರುವ ಸಾಮಗ್ರಿಗಳು ವಿತರಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪದಾಧಿಕಾರಿಗಳು ಈತನ ಆರೋಗ್ಯ ವಿಚಾರಣೆ ನಡೆಸುತ್ತಿದ್ದರು. ಅಲ್ಲದೆ ಕಳೆದ ಒಂದು ವಾರದ ಹಿಂದೆ ಈತನ ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದರು,ಈ ಸಂದರ್ಭ ಒಂದು ಲಕ್ಷ ಚೆಕ್ ಅನ್ನು ರೈತ ಸಂಘದ ಅಧ್ಯಕ್ಷರ ಸಮ್ಮುಖದಲ್ಲಿ ಅಧಿಕಾರಿಗಳು ವಿತರಿಸಿದ್ದರು.

ಚಿಕಿತ್ಸೆ ಮುಗಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ರೈತ ಮುಖಂಡರು, ಕಾವಾಲನನ್ನು ಮನೆಗೆ ತಲುಪಿಸಿದ್ದಾರೆ. ಈ ಸಂದರ್ಭ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಗ್ರಾಮದ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ, ರೈತ ಮುಖಂಡರಾದ ಕಿರುಗೂರುವಿನ ಚಪ್ಪುಡೀರ ರೋಷನ್, ಎನ್.ಕೆ.ಜಯ, ಪ್ರಕಾಶ್, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

- ಹೆಚ್.ಕೆ.ಜಗದೀಶ್