ಮಡಿಕೇರಿ, ಏ. 25: ದೇಶಾದ್ಯಂತ ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವ್ಯಾಪ್ತಿಗೆ ಬರುವ ಎಲ್ಲಾ ವರ್ಗದ ಕಲಾವಿದರು/ ಸಾಹಿತಿಗಳಿಗೆ ಆರ್ಥಿಕ ಸಹಾಯ ಮಾಡುವ ಬಗ್ಗೆ ಇಲಾಖಾ ಸಚಿವರ ನಿರ್ದೇಶನದಂತೆ, 10 ವರ್ಷಗಳ ಮೇಲ್ಪಟ್ಟ ವೃತ್ತಿನಿರತ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ/ ಸಾಹಿತಿಗಳ ಅರ್ಜಿಯನ್ನು ಆಹ್ವಾನಿಸಲಾಗಿದೆ. (ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಮತ್ತು ಸರ್ಕಾರಿ / ಅನುದಾನಿತ ಸಂಸ್ಥೆಗಳ ನೌಕರರಾಗಿರಬಾರದು)

ಸಂಬಂಧಿಸಿದ ಕಲಾವಿದರು ಅರ್ಜಿಯೊಂದಿಗೆ ಕಲಾವಿದರ / ಸಾಹಿತಿಗಳ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರವನ್ನು ತಾ. 27ರ ಒಳಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿ ವಿಳಾಸ : ಸ್ಕೌಟ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ, ದೂ. 08272-229074 ಅಥವಾ ಇ-ಮೇ :ಞoಜಚಿvಚಿ.ಚಿಛಿಚಿಜಚಿmಥಿ@gmಚಿiಟ.ಛಿom ಗೆ ಅರ್ಜಿ ಒಪ್ಪಿಸಲು ತಿಳಿಸಲಾಗಿದೆ.