ಶನಿವಾರಸಂತೆ, ಏ. 25: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ಯುವ ಸಮೂಹ ಸೇವಕ ಡಿ.ಎನ್. ವಸಂತ್ 5 ಬಡ ಕುಟುಂಬಗಳಿಗೆ ಅಕ್ಕಿ, ದಿನಸಿ, ಸಾಮಗ್ರಿಗಳ ಕಿಟ್ ನೀಡಿ ಮಾನವೀಯತೆ ಮೆರೆದರು.
ವಸಂತ್ ನೆರೆ ಜಿಲ್ಲೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಹಣಕಾಸು ವಿಭಾಗದ ಸಿಬ್ಬಂದಿ 5 ಬಡ ಕುಟುಂಬಗಳು ಹಸಿವಿನ ಸಂಕಷ್ಟದಲ್ಲಿದ್ದು ಯಾರೂ ನೆರವಿಗೆ ಬಾರದಿರುವುದನ್ನು ಗಮನಿಸಿ ಬಡ ಕುಟುಂಬಗಳ ಹಸಿವು ನೀಗಿಸಲು ಮುಂದಾದರು. 5 ಕುಟುಂಬಗಳಿಗೆ 15 ದಿನಗಳಿಗಾಗುವಷ್ಟು ಅಕ್ಕಿ, ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು.