ಕೂಡಿಗೆ, ಏ. 24: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಸಮೀಪದ ಗಂಧದ ಹಾಡಿಯ ಯುವಕ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ನೆಡೆದಿದೆ.ಗಂಧದ ಹಾಡಿಯ ಮೋಹನ್ ಎಂಬವರ ಮಗ ಲೋಕೇಶ್ (17) ಹುದುಗೂರುವಿನಲ್ಲಿ ಮರ ಕಪಾತ್‍ಗೆ ಹೋಗಿ ಕಡಿಯುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದ ಪರಿಣಾಮ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.