ಗೋಣಿಕೊಪ್ಪ ವರದಿ, ಏ. 24: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೇವಮಚ್ಚಿ ವನ್ಯಜೀವಿ ವ್ಯಾಪ್ತಿಯಲ್ಲಿ ಅಕ್ರಮ ತೇಗದ ಮರ ನಾಟ ಕಳವು ಆರೋಪದಡಿ ಆನೆಚೌಕೂರು ವನ್ಯಜೀವಿ ವಲಯ ವತಿಯಿಂದ ಇಬ್ಬರು ಆರೋಪಿಗಳೊಂದಿಗೆ ಸುಮಾರು 50 ಸಾವಿರ ಮೌಲ್ಯದ ಮರದ ನಾಟವನ್ನು ವಶಕ್ಕೆ ಪಡೆಯಲಾಗಿದೆ. ದಿಡ್ಡಳ್ಳಿ ಹಾಡಿ ನಿವಾಸಿ ಮಹೇಶ್ (34), ಬಸವನಹಳ್ಳಿ ಹಾಡಿಯ ಸೋಮಣ್ಣ (27) ಬಂಧಿತ ಆರೋಪಿಗಳು. ತಾ.23ರ ಮುಂಜಾನೆ ಸಿಬ್ಬಂದಿ ಗಸ್ತು ತಿರುಗುವ ಸಂದರ್ಭ ನಾಟ ಪತ್ತೆಯಾಗಿದ್ದು, ಮರದ ನಾಟಗಳು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
(ಮೊದಲ ಪುಟದಿಂದ) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ನಿರ್ದೇಶಕ ಮಹೇಶ್‍ಕುಮಾರ್, ಹುಣಸೂರು ವನ್ಯಜೀವಿ ಎಸಿಎಫ್ ಪ್ರಸನ್ನಕುಮಾರ್ ಮಾರ್ಗದರ್ಶನದಲ್ಲಿ ಆನೆಚೌಕೂರು ಆರ್‍ಎಫ್‍ಒ ಶಿವಾನಂದ ನಿಂಗಾಣಿ, ಡಿಆರ್‍ಎಫ್‍ಒ ಚೇತನ್ ಕೆಲೂರ್, ಶಿವಲಿಂಗಯ್ಯ, ಸಿಬ್ಬಂದಿ ತಿಮ್ಮಣ್ಣ, ಅಜರುದ್ದೀನ್, ವಿಶ್ವನಾಥ್, ರಾಮಕೃಷ್ಣ ಕಾರ್ಯಾಚರಣೆಯಲ್ಲಿದ್ದರು.