ಶನಿವಾರಸಂತೆ, ಏ. 24: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೆಕ್ಕೆಹನಲು ಗ್ರಾಮದ ಕಿರುಬಿಳಾಹ ಸುಬ್ಬಣ್ಣ ಅವರಿಗೆ ಸೇರಿದ ಎಮ್ಮೆಯನ್ನು ಗಡಿಭಾಗ ಯಸಳೂರು ಅರಣ್ಯದಲ್ಲಿ ಚಿರತೆಯೊಂದು ಕೊಂದು ತಿಂದು ಹಾಕಿರುವುದು ಪತ್ತೆಯಾಗಿದೆ.

ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಎಮ್ಮೆಯನ್ನು ಹುಡುಕಾಡಿದಾಗ ಅರಣ್ಯದಲ್ಲಿ ಸತ್ತು ಬಿದ್ದಿರುವುದು ಗೋಚರಿಸಿದೆ. ಹೈನುಗಾರಿಕೆಯೇ ಜೀವನಾಧಾರವಾಗಿರುವ ಸುಬ್ಬಣ್ಣ ಅವರ ಮತ್ತೊಂದು ಹಸುವೂ ಕಾಣೆಯಾಗಿರುವುದಾಗಿ ತಿಳಿಸಿದ್ದಾರೆ. ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

3 ದಿನಗಳ ಹಿಂದೆ ದೊಡ್ಡಬಿಳಾಹ ಗ್ರಾಮದ ಹಸಿರು ಮೆಣಸಿನಕಾಯಿ ಹೊಲದಲ್ಲಿ ಕಾಣಿಸಿಕೊಂಡ ಚಿರತೆ ಪಕ್ಕದ ಕಾಫಿ ತೋಟದೊಳಗೆ ನುಸುಳಿತೆಂದು ಪ್ರತ್ಯಕ್ಷದರ್ಶಿಗಳಾದ ವೈಭವ್ ಹಾಗೂ ಪ್ರಣೀತ್ ಕುಮಾರ್ ತಿಳಿಸಿದ್ದಾರೆ. ಗ್ರಾಮಸ್ಥರು ಭಯಭೀತರಾಗಿದ್ದಾರೆ.