ಪೆÇನ್ನಂಪೇಟೆ. ಏ. 24: ಪೆÇನ್ನಂಪೇಟೆಯಲ್ಲಿ ಪ್ರಸ್ತುತ ವ್ಯಾಪಾರ ಮಾಡುತ್ತಿರುವ ಸ್ಥಳಗಳಲ್ಲಿ ತರಕಾರಿ ಮಾರಾಟ ನಿರ್ಬಂಧಿಸಿ, ತಾ. 27ರಿಂದ ಕೊಡವ ಸಮಾಜ ಸಮೀಪದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ವಾರದ ಈ ಮೂರು ದಿನಗಳಂದು ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟಣ ಪ್ರದೇಶದಲ್ಲಿ ವಾಹನ ಮತ್ತು ಜನ ದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ ವಾಗುತ್ತಿರುವುದರಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಭಿವೃಧ್ದಿ ಅಧಿಕಾರಿಗಳೊಂದಿಗೆ ವೀರಾಜಪೇಟೆ ತಾಲೂಕು ತಹಶೀಲ್ದಾರರು ಚರ್ಚಿಸಿ, ಸಾಮಾಜಿಕ ಆರೋಗ್ಯ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತರಕಾರಿ ವ್ಯಾಪಾರ ಮಾಡಲು ತಾತ್ಕಾಲಿಕ ಪರವಾನಗಿ ಮತ್ತು ವಾರ್ಷಿಕ ಪರವಾನಗಿ ಪಡೆದುಕೊಂಡಿರುವ ಎಲ್ಲಾ ವಾಹನ ಮತ್ತು ಅಂಗಡಿಗಳನ್ನು ಪೆÇನ್ನಂಪೇಟೆಯ ಕೊಡವ ಸಮಾಜದ ಹತ್ತಿರ ಇರುವ ಕಿರಿಯ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಸ್ಥಳಾಂತರಿಸಲು ಆದೇಶಿಸಿರುತ್ತಾರೆ. ಈ ನಿಯಮವು ಲಾಕ್ ಡೌನ್ ಕೊನೆಗೊಳ್ಳುವ ವರೆಗೂ ಜಾರಿಯಲ್ಲಿರಲಿದ್ದು, ಎಲ್ಲಾ ತರಕಾರಿ ವ್ಯಾಪಾರಿಗಳಿಗೂ ಅನ್ವಯಿಸಲಿದೆ.