ಮಡಿಕೇರಿ, ಏ. 23: ತಾ. 29ರ ಸಂಜೆ 3 ಗಂಟೆಯಿಂದ 4.30ರ ತನಕ ಸಂಜೆ ನಿತ್ಯ ಒಂದೂವರೆ ಗಂಟೆಗಳ ಸಮಯ ದೂರದರ್ಶನ ಚಂದನವಾಹಿನಿ ಮೂಲಕ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ಮನೆಗಳಲ್ಲೇ ಕಲಿಕೆಯ ಪುನರಾವರ್ತನೆಗಾಗಿ ಪಾಠ ಪ್ರವಚನ ಆರಂಭಗೊಳ್ಳಲಿದೆ.ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಿಂದ ಕೊರೊನಾ ಹಿನ್ನೆಲೆ ಎಸ್‍ಎಸ್‍ಎಲ್ ಸಿ ಮಕ್ಕಳ ಭವಿಷ್ಯಕ್ಕಾಗಿ ಈ ಕಾರ್ಯಕ್ರಮ ಜಾರಿಯಾಗಲಿದೆ. ಅಲ್ಲದೆ ದೂರದರ್ಶನ ಸಂಪರ್ಕ ವ್ಯವಸ್ಥೆ ಇಲ್ಲದ ಗ್ರಾಮೀಣ ಮಕ್ಕಳಿಗೆ ಆಯಾ ಶಾಲೆಗಳ ಶಿಕ್ಷಕರು ಪಠ್ಯ ಕ್ರಮವನ್ನು ಮೊಬೈಲ್ ಸಂಪರ್ಕದಲ್ಲಿ ಬೋಧಿಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ತಿಳಿಸಿದ್ದಾರೆ.ಮಾದರಿ ಪ್ರಶ್ನೋತ್ತರ: ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಸಂಬಂಧಿಸಿದ ಶಾಲೆಗಳ ವಿವಿಧ ಪಠ್ಯಕ್ರಮಗಳಿಗೆ ಅನುಸಾರವಾಗಿ ಶಿಕ್ಷಕರು ಮೊಬೈಲ್ ಮುಖಾಂತರ ಮಕ್ಕಳಿಗೆ ಸಂಪರ್ಕಿಸಿಯೂ ವಿದ್ಯಾಭ್ಯಾಸ ಕಲಿಸುತ್ತಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾಹಿತಿ ನೀಡಿದರು.ವಿಶೇಷ ಆಸಕ್ತಿ: ರಾಜ್ಯ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಆಶಯದಂತೆ, ಮಕ್ಕಳಲ್ಲಿ ಕಲಿಕೆಯೊಂದಿಗೆ ಮುಂದಿನ ಪಠ್ಯಕ್ರಮಗಳನ್ನು ಅಭ್ಯಾಸಿಸುವಲ್ಲಿ ದೂರದರ್ಶನ ಮೂಲಕ ಕಲಿಕೆಗೆ ಪ್ರೋತ್ಸಾಹಿಸುವದರೊಂದಿಗೆ ವಿಶೇಷ ಆಸಕ್ತಿ ಮೂಡಿಸಲಾಗುತ್ತಿದೆ ಎಂದರು.

ವಿವಿಧ ಚಟುವಟಿಕೆ: ಕೇವಲ ಪಠ್ಯಕ್ರಮ ಮಾತ್ರವಲ್ಲದೆ ಸಂಗೀತ, ನಾಟಕ, ರೂಪಕ, ರಸಪ್ರಶ್ನೆ ಇನ್ನಿತರ ಚಟುವಟಿಕೆ ಮುಖಾಂತರ

ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪಾಠ

ಕೊರೊನಾದಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಮುಂದೂಡಿಕೆಯಾಗಿ ರುವುದರಿಂದ ಪರೀಕ್ಷೆ ಬರೆಯಲು ಆತಂಕದಿಂದ ಕಾಯುತ್ತಿರುವ ಮಕ್ಕಳಿಗೆ ದೂರದರ್ಶನದ ಚಂದನ ವಾಹಿನಿಯಲ್ಲಿತಾ. 29 ರಿಂದ ಪುನರ್ ಮನನ ತರಗತಿಗಳನ್ನು ಆರಂಭಿಸಲಾಗುತ್ತದೆ.

ಈ ತರಗತಿಗಳು ತಾ. 29 ರಿಂದ ಪ್ರತಿ ದಿನ ಮಧ್ಯಾಹ್ನ 3 ರಿಂದ 4.30ರ ವರೆಗೆ ನಡೆಯಲಿದ್ದು, ನುರಿತ ಶಿಕ್ಷಕರು ವಿಷಯವಾರು ಬೋಧನೆ ಮಾಡಲಿದ್ದಾರೆ. (ಮೊದಲ ಪುಟದಿಂದ) ದಿನದಲ್ಲಿ ನಾಲ್ಕಾರು ಗಂಟೆ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ‘ಮಕ್ಕಳವಾಣಿ’ ಯೂಟ್ಯೂಬ್ ಚಾನಲ್ ಮೂಲಕ ಪ್ರೋತ್ಸಾಹಿಸುತ್ತಿರುವುದಾಗಿ ಅಧಿಕಾರಿಗಳು ವಿವರಿಸಿದರು.

ಎಸ್‍ಎಸ್‍ಎಲ್‍ಸಿ ಒತ್ತು: ಈ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳನ್ನು ಕೂಡ ಆತಂಕಕ್ಕೆ ಅವಕಾಶವಾಗದಂತೆ ಶಿಕ್ಷಕರು ನಿತ್ಯ ಸಂಪರ್ಕಿಸಿ, ಮೊಬೈಲ್ ಮೂಲಕ ಮಾದರಿ ಪ್ರಶ್ನೆಗಳನ್ನು ನೀಡಿ ಉತ್ತರವನ್ನು ಮರುದಿವಸ ಪರಿಶೀಲಿಸಿ, ಸರಿತಪ್ಪುಗಳ ತಿದ್ದುಪಡಿಯೊಂದಿಗೆ ಆತ್ಮವಿಶ್ವಾಸ ತುಂಬುವ ಮುಖಾಂತರ ಸಂಶಯಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಆತ್ಮವಿಶ್ವಾಸ ಹೆಚ್ಚಿದೆ: ವಿವಿಧ ಶಾಲೆಗಳ ಶಿಕ್ಷಕರು ವಿವಿಧ ಶಾಲೆಗಳ ಮಕ್ಕಳನ್ನು ಮೊಬೈಲ್ ಮುಖಾಂತರ ಗುಂಪುಗಳಾಗಿ ಮಾಡಿಕೊಂಡು ಸಾಮೂಹಿಕ ಕಲಿಕೆಯೊಂದಿಗೆ ಆತ್ಮವಿಶ್ವಾಸ ಮೂಡಿಸುತ್ತಿರುವುದು, ಮಕ್ಕಳು ಶಾಲೆಗಳಿಗೆ ಹಾಜರಾಗದಿದ್ದರೂ ಈ ಮೂಲಕ ಉತ್ತಮ ಸ್ಪಂದನ ದೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವುದು ಅರಿವಿಗೆ ಬಂದಿದೆ ಎಂದರು. ಹೀಗಾಗಿ ಕೊರೊನಾ ಮುಂಜಾಗ್ರತಾ ನಿರ್ಬಂಧ ಅನಿರ್ಧಿಷ್ಟ ಮುಂದುವರಿಕೆ ಇರುವ ತನಕವೂ, ಮಕ್ಕಳಿಗೆ ಈ ರೀತಿ ಕಲಿಕೆ ಅನಿವಾರ್ಯವೆಂದು ಅಭಿಪ್ರಾಯ ಪಟ್ಟಿರುವ ಅಧಿಕಾರಿಗಳು, ಪೋಷಕರು ಸರಕಾರದ ಯೋಜನೆಗೆ ಸ್ಪಂದಿಸಿ, ಶಿಕ್ಷಕರ ಪರಿಶ್ರಮವನ್ನು ಮಕ್ಕಳು ಸರಿಯಾಗಿ ಬಳಸಿಕೊಳ್ಳುವತ್ತ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9448999344 ಹಾಗೂ 9480695260 ಸಂಖ್ಯೆಯನ್ನು ಸಂಪರ್ಕಿಸಬಹುದು.

ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪಾಠ

(ಮೊದಲ ಪುಟದಿಂದ) ಮೊದಲ 16 ದಿನ ಪ್ರತಿ 45 ನಿಮಿಷಗಳ ಎರಡು ಅವಧಿಗಳಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯಗಳ ಬೋಧನಾ ತರಗತಿಗಳು ನಡೆಯಲಿದ್ದು, 17ನೇ ದಿನ ಈ ಎರಡು ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ವಿಧಾನವನ್ನು ಶಿಕ್ಷಕರು ತಿಳಿಸಿಕೊಡಲಿದ್ದಾರೆ.

18ನೇ ದಿನದಿಂದ ಸಮಾಜ ವಿಜ್ಞಾನದ ತರಗತಿಗಳು 6 ದಿನಗಳ ಅವಧಿಗೆ ನಡೆಯಲಿದ್ದು, ನಂತರದ ದಿನಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷಾ ವಿಷಯಗಳ ಬೋಧನೆಯನ್ನು ಮಾಡಲಾಗುತ್ತದೆ. ಪ್ರತಿ ವಿಷಯ ಬೋಧನೆಯ ಕೊನೆಯಲ್ಲಿ ವಿಶೇಷವಾಗಿ ತಯಾರಿಸಲಾಗಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನವನ್ನು ಹೇಳಿಕೊಡಲಾಗುತ್ತದೆ.

-ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು