ನವದೆಹಲಿ, ಏ. 23: ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಪತ್ನಿ ಸವಿತಾ ಕೋವಿಂದ್ ತಾವೇ ಮಾಸ್ಕ್ ತಯಾರಿಕೆ ಮಾಡಿದ್ದಾರೆ. ಈ ಫೆÇೀಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಸವಿತಾ ಅವರ ಕೆಲಸಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊರೊನಾ ಸೋಂಕು ತಡೆಯಲು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಅನೇಕ ಬಡವರಿಗೆ ಮನೆ ಮಂದಿಗೆ ಮಾಸ್ಕ್ ಖರೀದಿ ಮಾಡುವಷ್ಟು ಸಹ ಇರುವುದಿಲ್ಲ. ಅಂತಹವರ ನೆರವಿಗೆ ಈಗ ಸವಿತಾ ಬಂದಿದ್ದಾರೆ. (ಮೊದಲ ಪುಟದಿಂದ) ತಾವೇ ಮಾಸ್ಕ್ ತಯಾರು ಮಾಡಿ, ಅದನ್ನು ಬಡ ಜನರಿಗೆ ನೀಡುತ್ತಿದ್ದಾರೆ.

ತಾವು ಮಾಸ್ಕ್ ಧರಿಸಿಯೇ ಹೊಲಿಗೆ ಯಂತ್ರದ ಮೇಲೆ ಕುಳಿತು, ಮಾಸ್ಕ್‍ಗಳ ತಯಾರಿಕೆಯಲ್ಲಿ ಸವಿತಾ ನಿರತರಾಗಿದ್ದಾರೆ. ದೆಹಲಿಯ ಶಕ್ತಿ ಹಾತ್ ನಲ್ಲಿರುವ ರಾಷ್ಟ್ರಪತಿಗಳ ಎಸ್ಟೇಟ್‍ನ ತಮ್ಮ ಮನೆಯಲ್ಲಿ ಅವರು ಮಾಸ್ಕ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್‍ಡೌನ್ ನಡುವೆ ಮನೆಯಿಂದ ಹೊರ ಹೋಗುವ ಆಗಿಲ್ಲ. ಬೇರೆ ಕೆಲಸಗಳನ್ನು ಮಾಡುವಂತಿಲ್ಲ. ಇಂತಹ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿರುವ ಅವರು ಕೊರೊನಾ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.