ಮಡಿಕೇರಿ, ಏ.23: ಮರ್ಕೆರಾ ಕೌಂಟಿ ಕ್ಲಬ್ ವತಿಯಿಂದ ಸುಮಾರು 1 ಲಕ್ಷ ರೂ. ವೆಚ್ಚದ ಆರೋಗ್ಯ ಪರಿಕರಗಳನ್ನು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಮರ್ಕೆರ ಕೌಂಟಿ ಕ್ಲಬ್ ವತಿಯಿಂದ ನೀಡಿದ ಒಂದು ಲಕ್ಷ ರೂ. ವೆಚ್ಚದ ಕ್ರಾಸ್ ಕಾರ್ಟ್ಗಳ ಮೂಲಕ ವಿವಿಧ ವಾರ್ಡ್ಗಳಿಗೆ ಔಷದಿಗಳನ್ನು ತೆಗೆದುಕೊಂಡು ಹೋಗಿ ನೀಡಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು. ಕೋವಿಡ್ 19 ಸಂದರ್ಭ ವಿವಿಧ ಸಂಘ ಸಂಸ್ಥೆಗಳು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಸಾಮಾಜಿಕ ಚಟುವಟಿಕೆಗಳು ಸದಾ ಮುಂದುವರೆ ಯಬೇಕು ಎಂದು ಬೋಪಯ್ಯ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ಜಗತ್ತು ಕಷ್ಟ ಸಂದರ್ಭದಲ್ಲಿದ್ದು, ಇಂತಹ ವೇಳೆಯಲ್ಲಿ ಸಂಘ ಸಂಸ್ಥೆಗಳು ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾಸ್ಪತ್ರೆಯ ವಾರ್ಡ್ಗಳಿಗೆ ಔಷಧಿಗಳನ್ನು ಸಾಗಿಸುವ ಉಪಕರಣ ಇದಾಗಿದ್ದು, ಜಿಲ್ಲಾಸ್ಪತ್ರೆಗೆ ಈ ಸಾಧನದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಉಚಿತವಾಗಿ ಇವುಗಳನ್ನು ನೀಡಿದ್ದು ಉತ್ತಮ
(ಮೊದಲ ಪುಟದಿಂದ) ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮರ್ಕೆರಾ ಕೌಂಟಿ ಕ್ಲಬ್ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಮಾತನಾಡಿ ಕೋವಿಡ್ ಆಸ್ಪತ್ರೆಗೆ ಒಂದು ಲಕ್ಷ ರೂ ವೆಚ್ಚದ 5 ಕ್ರಾಸ್ ಕಾರ್ಟ್ ಉಪಕರಣಗಳನ್ನು ಹಸ್ತಾಂತರಿಸಲಾಗಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧೀಕ್ಷಕ ಡಾ.ಲೋಕೇಶ್, ಆಡಳಿತಾಧಿಕಾರಿ ಮೇರಿ ನಾಣಯ್ಯ, ಸಹಾಯಕ ಆಡಳಿತಾಧಿಕಾರಿ ಬಸವರಾಜು, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ತಾಪಂಡ ಸುರೇಶ್, ಖಜಾಂಜಿ ಸಿ.ಪಿ.ಪೂವಣ್ಣ, ನಿರ್ದೇಶಕರಾದ ಸುರೇಶ್ ಚಂಗಪ್ಪ, ಬಿ.ಕೆ.ಪೂಣಚ್ಚ ಇತರರು ಇದ್ದರು.