ಮಡಿಕೇರಿ, ಏ. 23: ಹುಣಸೂರು ಅರಣ್ಯ ಪ್ರದೇಶ ವ್ಯಾಪ್ತಿಯ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆಯಾಡಲು ಯತ್ನಿಸುತ್ತಿದ್ದ ಸೋಮವಾರಪೇಟೆಯ ಇಬ್ಬರನ್ನು ಬಂಧಿಸಲಾಗಿದೆ. ತಾ. 22ರ ರಾತ್ರಿ 11.30ಕ್ಕೆ ಕಾವೇರಿ ನದಿಯ ತೀರದಲ್ಲಿ ಆರೋಪಿಗಳು ಬೇಟೆಯಾಡಲು ಯತ್ನಿಸುತ್ತಿದ್ದು, ಅವರ ಬಳಿ ಇದ್ದ 1 ಒಂಟಿ ನಳಿಕೆಯ ಬಂದೂಕು, ತಲೆಗೆ ಧರಿಸಿದ್ದ 2 ಟಾರ್ಚ್, 1 ಕತ್ತಿ ಹಾಗೂ 5 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.ಹುಣಸೂರು ವಿಭಾಗದ ಅರಣ್ಯಾಧಿಕಾರಿಗಳ ತಂಡದ ರಾಮು, ಸಚಿನ್, ಮಂಜು, ಗಣೇಶ್ ಹಾಗೂ ಕಾವೇರಿ ಆ್ಯಂಟಿ ಪೋಚಿಂಗ್ ಕ್ಯಾಂಪ್ ಸಿಬ್ಬಂದಿ, ಆರ್.ಎಫ್.ಒ ಹನುಮಂತ ರಾಜು ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.