ಮಡಿಕೇರಿ, ಏ. 23: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಇಂದು ಕೊಡಗಿನ ಕೊಪ್ಪ ಹಾಗೂ ಶಿರಂಗಾಲ ಗಡಿ ಗೇಟ್‍ಗಳಲ್ಲಿ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಡಿವೈಎಸ್‍ಪಿ ಶೈಲೇಂದ್ರ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಅಲ್ಲಿನ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಮೇಲ್ಮನೆ ಸದಸ್ಯರ ಭೇಟಿ ಸಂದರ್ಭ ಬಿಜೆಪಿ ಮುಖಂಡ ಜಿ.ಎಲ್. ನಾಗರಾಜ್ ಸೇರಿದಂತೆ ಇತರ ಕಾರ್ಯಕರ್ತರು ಹಾಜರಿದ್ದರು.