ಕೂಡಿಗೆ, ಏ. 23: ಕೂಡಿಗೆಯ ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದಲ್ಲಿ ಈ ವ್ಯಾಪ್ತಿಯ 21 ಗ್ರಾಮಗಳ ರೈತರಿಗೆ ಅನುಕೂಲ ಕಲ್ಪಿಸುವ &divound;ಟ್ಟಿನಲ್ಲಿ ಸಹಕಾರ ಸಂಘದ ಮೂಲಕ ಎಲ್ಲಾ ಕಂಪನಿ ಗೊಬ್ಬರವನ್ನು ಗೋದಾಮುಮಿನಲ್ಲಿ ದಾಸ್ತಾನು ಇಡಲಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೂಡಿಗೆ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

ರೈತರ ಆದ್ಯತೆಯ ಮೇರೆಗೆ ಮತ್ತು ಸಾವಯವ ಗೊಬ್ಬರ, ಬೇವಿನ ಹಿಡ್ಡಿ, ರಾಸಾಯನಿಕ ಗೊಬ್ಬರಗಳ 10 ಕಂಪನಿಯ ವಿವಿಧ ಬಗೆಯ ಗೊಬ್ಬರಗಳನ್ನು ದಾಸ್ತಾನು ಇಡಲಾಗಿದೆ. ಅದನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಪ್ರಯೋಜನವನ್ನು ಈ ವ್ಯಾಪ್ತಿಯ ರೈತರು ಬಳಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.