ಪಾಲಿಬೆಟ್ಟ, ಏ. 22: ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ತಡೆಗೆ ಸರಕಾರಗಳು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಶುಚಿತ್ವವನ್ನು ಕಾಪಾಡಿ ರೋಗ ಹರಡದಂತೆ ಎಚ್ಚರವಹಿಸಿಬೇಕೆಂದು ಪಾಲಿಬೆಟ್ಟ ಲಯನ್ಸ್ ಕ್ಲಬ್‍ನ ಅಧ್ಯಕ್ಷೆ ಕನಕ ಅಯ್ಯಪ್ಪ ಮನವಿ ಮಾಡಿದ್ದಾರೆ.

ಪಾಲಿಬೆಟ್ಟ ಗ್ರಾ.ಪಂ. ಹಾಗೂ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಮುಖಾಂತರ ಸಾರ್ವಜನಿಕರಿಗೆ ರೂ. 25 ಸಾವಿರ ಮೊತ್ತದ ಒಂದು ಸಾವಿರ ಮಾಸ್ಕ್‍ನ್ನು ಉಚಿತವಾಗಿ ಲಯನ್ಸ್ ಸಂಸ್ಥೆಯಿಂದ ನೀಡಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ, ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಲಯನ್ಸ್ ಕ್ಲಬ್‍ನ ಕಾರ್ಯದರ್ಶಿ ಅನಿತ ಟಿ.ವಿ, ಖಜಾಂಚಿ ಶಾರದಾ ಪೊನ್ನಪ್ಪ, ಲಯನ್ಸ್ ಟ್ರಸ್ಟ್‍ನ ಅಧ್ಯಕ್ಷ ಅನಂತ್ ರಾಮ್ ಮತ್ತು ಕಾರ್ಯದರ್ಶಿ ಡಾ. ಎ.ಸಿ. ಗಣಪತಿ ಇದ್ದರು.