ವೀರಾಜಪೇಟೆ, ಏ. 21: ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟದಲ್ಲಿ ಬಂದೋಬಸ್ತನ್ನು ಇನ್ನಷ್ಟು ಬಿಗಿಗೊಳಿಸಲು ಮಾಕುಟ್ಟ ಹಾಗೂ ಕುಟ್ಟದಲ್ಲಿ ಸಿ.ಸಿ. ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕೇರಳ ರಾಜ್ಯದಿಂದ ವಾಹನ ಮಾತ್ರವಲ್ಲ ಕಾಲ್ನಡಿಗೆಯ ಜನರು ಈ ಗೇಟ್ ದಾಟದಂತೆ ನಿಗಾವಹಿಸಲಾಗಿದೆ. ಚೆಕ್ ಪೋಸ್ಟ್ಗಳಲ್ಲಿ ಬಂದೋಬಸ್ತ್ ಗಾಗಿ ಹೆಚ್ಚಿನ ಪೊಲೀಸರನ್ನು ಪೊಲೀಸ್ ಇಲಾಖೆಯಿಂದ ನಿಯೋಜಿಸಲಾಗಿದೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದರು.