ಮಡಿಕೇರಿ, ಏ.21: ತಾಲೂಕಿನ ಪೆರಾಜೆ ಗ್ರಾಮದ ಹಾಲೆಕಾಡುವಿನಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎನ್.ಪಿ.ಹೊನ್ನಪ್ಪ ಎಂಬವರು ಸಂಗ್ರಹಿಸಿಟ್ಟಿದ್ದ 200 ಲೀಟರ್ ಗೇರು ಹಣ್ಣಿನ ಪುಳಿಗಂಜಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಆರೋಪಿ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ. ಅಬಕಾರಿ ನಿರೀಕ್ಷಕಿ ಆರ್.ಎಂ.ಚೈತ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಅನಿಲ್ ಜಿ.ಆರ್., ಅಬಕಾರಿ ರಕ್ಷಕರಾದ ಅಮ್ಜದ್ ಕೆ.ಎಸ್, ರಾಜು ಎಚ್.ಎಸ್, ಲಕ್ಷ್ಮೀದೇವಿ ಎಸ್ ಭಾಗವಹಿಸಿದ್ದರು.