ಮಡಿಕೇರಿ, ಏ. 21: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದಲ್ಲಿ ಕೊರೊನಾ ನಿರ್ಬಂಧ ನಡುವೆ ಕಾನೂನು ಬಾಹಿರವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಅಲ್ಲಿನ ನಿವಾಸಿ ಟಿ. ಮಾದಪ್ಪ (56) ಎಂಬ ವ್ಯಕ್ತಿ ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದ ಮೇರೆಗೆ ಶ್ರೀಮಂಗಲ ಪ್ರಭಾರ ಠಾಣಾಧಿಕಾರಿ ಕೆ.ಜಿ. ವಸಂತಕುಮಾರ್ ಹಾಗೂ ಪ್ರೊಬೆಷನರಿ ಎಸ್.ಐ. ಮೋಹನ್ ಕುಮಾರ್, ಸಿಬ್ಬಂದಿಗಳಾದ ಸಾಬು, ರವಿ, ಗಣೇಶ್, ಶಿವಪ್ಪ, ಸುಕುಮಾರ್ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಅಬ್ಕಾರಿ ಕಾಯ್ದೆಯಡಿ ಕ್ರಮಕೈಗೊಂಡಿದ್ದಾರೆ.