ಕುಶಾಲನಗರ, ಏ. 21: ಕುಶಾಲನಗರ ಸಮೀಪ ಕೊಪ್ಪ ಗ್ರಾಮದ ಕಾಡಂಚಿನ ಗಿರಿಜನರಿಗೆ ನಿರಾಶ್ರಿತ ಬೌದ್ಧ ಭಿಕ್ಷುಗಳು ಅಗತ್ಯ ವಸ್ತುಗಳ ವಿತರಣೆ ಮಾಡಿದರು.

ಬೈಲುಕುಪ್ಪೆ ಟಿಬೆಟಿಯನ್ ಶಿಬಿರದ ಶೆರ್ಪಾನ್ ಬೌದ್ದ ಮಹಾವಿದ್ಯಾಲಯದ ವತಿಯಿಂದ ರಾಣಿಗೇಟ್ ಸುತ್ತಮುತ್ತಲ ಸಾವಿರ ಕುಟುಂಬಗಳಿಗೆ ಅಕ್ಕಿ ಮತ್ತಿತರ ವಸ್ತುಗಳನ್ನು ಪಿರಿಯಾಪಟ್ಟಣ ಶಾಸಕರಾದ ಕೆ ಮಹದೇವ್ ಅವರ ಮೂಲಕ ವಿತರಿಸಲಾಯಿತು.

ಗೌಡನಕಟ್ಟೆ ರಾಣಿಗೇಟ್, ದೊಡ್ಡ ಹಾರ್ವೆ ಮತ್ತಿತರ ಗ್ರಾಮಗಳಲ್ಲಿ ನೂರಾರು ಬಡ ಜನರಿಗೆ ಅಗತ್ಯ ವಸ್ತುಗಳ ವಿತರಣೆ ನಡೆಯಿತು. ಈ ಸಂದರ್ಭ ಪ್ರಮುಖರಾದ ಮುತ್ತ, ಶೋಭಾ ಶ್ರೀನಿವಾಸ್, ಉದ್ಯಮಿ ಪ್ರತಾಪ್, ಗ್ರಾಮ ಪಂಚಾಯಿತಿ ಅಧಿಕಾರಿ ರವಿ, ಅಧಿಕಾರಿಗಳಾದ ಆನಂದ್ ಕುಮಾರ್, ಕಲೀಲ್ ಅಹಮ್ಮದ್, ನವೀನ್‍ರಾವ್, ಕೊಪ್ಪ ಗ್ರಾ.ಪಂ. ಅಧಿಕಾರಿ ರವಿ ಗ್ರಾಮದ ಪ್ರಮುಖರಾದ ಗಿರೀಶ್, ಚಂದ್ರು ಮತ್ತಿತರರಿದ್ದರು.