ಸಿದ್ದಾಪುರ, ಏ. 20: ಲಾಕ್ ಡೌನ್ ಉಲ್ಲಂಘನೆ ಮಾಡಿ ಮೈದಾನದಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ಸಂದರ್ಭ ಆಟವಾಡದಂತೆ ಬುದ್ದಿ ಹೇಳಲು ತೆರಳಿದ ಪೆÇಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ಸೋಮವಾರ ನಡೆದಿದೆ. ಹುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಮೀಪದಲ್ಲಿರುವ ಮೈದಾನವೊಂದರಲ್ಲಿ ಲಾಕ್ ಡೌನ್ ಉಲ್ಲಂಘನೆ ಮಾಡಿ ಯುವಕರ ಗುಂಪೆÇಂದು ಬೆಳಗ್ಗಿನಿಂದಲೇ ವಾಲಿಬಾಲ್ ಆಟವಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಚೆನ್ನಯ್ಯನಕೋಟೆ ಉಪ ಪೆÇಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರು ಸ್ಥಳಕ್ಕೆ ತೆರಳಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಹಾಗೂ ಕಾನೂನು ಉಲ್ಲಂಘಿಸದಂತೆ ಯುವಕರಿಗೆ ಬುದ್ದಿ ಮಾತುಗಳನ್ನು ಹೇಳಿದ್ದರು. ಆದರೂ ಕೂಡ ಕಾನೂನು ಉಲ್ಲಂಘನೆ ಮಾಡಿ ಯುವಕರ ಗುಂಪು ಸಂಜೆಯ ಸಮಯದಲ್ಲೂ ಕೂಡ ವಾಲಿಬಾಲ್ ಆಡುತ್ತಿರುವ ಬಗ್ಗೆ ಪೆÇಲೀಸರಿಗೆ ದೂರು ಬಂದಿತ್ತು. ದೂರಿನ ಅನ್ವಯ ಸ್ಥಳಕ್ಕೆ ತೆರಳಿದ ಪೆÇಲೀಸರು ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಬರದಂತೆ ಹಾಗೂ ಗುಂಪು ಸೇರದಂತೆ ಎಚ್ಚರಿಕೆಯನ್ನು ನೀಡಿದರು ಎನ್ನಲಾಗಿದೆ. ಈ ವೇಳೆ ಇದರಿಂದ ಆಕ್ರೋಶಗೊಂಡ ಯುವಕರು ಗುಂಪಿನಲ್ಲಿದ್ದ ಕೆಲವರು ಪೆÇಲೀಸ್ ಸಿಬ್ಬಂದಿಗಳಾದ ಸ್ವಾಮಿ ಹಾಗೂ ಮಲ್ಲಪ್ಪ ಎಂಬವರುಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕೆಲವು ಪೆÇಲೀಸರನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಂಡಿಯ ನಿವಾಸಿ ನಜೀರ್ ಹಾಗೂ ಇತರರ ವಿರುದ್ಧ ವಿವಿಧ ಪ್ರಕರಣಗಳು ಸಿದ್ದಾಪುರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.