ಮಡಿಕೇರಿ, ಏ. 20: ಲಾಕ್‍ಡೌನ್ ಹಿನ್ನೆಲೆ ಸಂಕಷÀ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಪಡಿತರ ನೀಡುವ ನಿಟ್ಟಿನಲ್ಲಿ ಪೆÇಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಕೊಡಗು ಜಿಲ್ಲಾಡಳಿತ ವತಿಯಿಂದ ತೆರೆದಿರುವ ಹಸಿವು ಪೆಟ್ಟಿಗೆಗೆ ಬೆಂಗಳೂರು ಮೂಲದ ಕರುಣ್ ಕರುಂಬಯ್ಯ ಮತ್ತು ಮಲ್ಲಿಕ ದಂಪತಿ ಸುಮಾರು 50 ಸಾವಿರ ಮೌಲ್ಯದ 300 ಕೆ.ಜಿ. ಬೇಳೆ, 100 ಲೀಟರ್ ಅಡುಗೆ ಎಣ್ಣೆ ನೀಡಿದರು. ಕೊಡಗು ಪೆÇಲೀಸ್ ವತಿಯಿಂದ ಮಡಿಕೇರಿ ನಗರ ಸಿಪಿಐ ಅನೂಪ್ ಮಾದಪ್ಪ ಹಾಗೂ ಜಿಲ್ಲಾಡಳಿತ ಪರವಾಗಿ ಇಓ ಲಕ್ಷ್ಮೀ ಹಾಗೂ ಅಧಿಕಾರಿಗಳು ಹಾಜರಿದ್ದು ಪಡಿತರ ಸ್ವೀಕರಿಸಿದರು.