ಮಡಿಕೇರಿ, ಏ. 16 : ಮಡಿಕೇರಿ, ವಿದ್ಯುತ್ ಉಪ-ಕೇಂದ್ರದಿಂದ 66/11 ಕೆವಿ ಹೊರಹೋಗುವ ಎಫ್ 1 ಕೋಟೆ, ಎಫ್ 5 ಜಿ.ಟಿ. ರಸ್ತೆ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿರುವ ಹಿನ್ನೆಲೆ ತಾ. 18 ರಂದು ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಮಡಿಕೇರಿ ನಗರ ವ್ಯಾಪ್ತಿಯ ಅರಣ್ಯ ಭವನ, ಸುದರ್ಶನ ವೃತ್ತ, ಚೈನ್‍ಗೇಟ್, ಪುಟಾಣಿನಗರ, ಮೈಸೂರು ರಸ್ತೆ, ಜಯನಗರ, ಅಶೋಕಪುರ, ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಕೋರಿದ್ದಾರೆ.