ಮಡಿಕೇರಿ, ಏ. 15: ಈಗಾಗಲೇ ಮೇ 3 ರವರೆಗೆ ಲಾಕ್‍ಡೌನ್ ಅವಧಿಯನ್ನು ದೇಶದಾದ್ಯಂತ ವಿಸ್ತರಿಸಲಾಗಿದೆ. ಏಪ್ರಿಲ್ 20 ರವರೆಗೆ ಕಟ್ಟುನಿಟ್ಟಾಗಿ ಲಾಕ್‍ಡೌನ್ ನಿಯಮಗಳನ್ನು ಪಾಲಿಸುವಂತೆ ಪ್ರಧಾನಿ ಮೋದಿಯವರು ತಾ.14 ರಂದು ಕರೆ ನೀಡಿದ್ದರು. ತಾ. 20 ರ ನಂತರ ನಿಯಮಗಳಲ್ಲಿ ಅಲ್ಪ ಪ್ರಮಾಣದ ಸಡಿಲಿಕೆಗಳನ್ನು ತರಲಾಗುವುದೆಂದೂ ಪ್ರಧಾನಿ ತಿಳಿಸಿದ್ದರು.

ಲಾಕ್‍ಡೌನ್‍ನಿಂದಾಗಿ ಸಾರ್ವಜನಿಕರು ಅನುಭವಿಸುತ್ತಿರುವ ಕಷ್ಟಗಳಿಂದಾಗಿ ತಾ.20 ರ ನಂತರ ಕೆಲವು ಚಟುವಟುಕೆಗಳಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಚಟುವಟಿಕೆಗಳ ಉಸ್ತುವಾರಿಯನ್ನು ಸಂಬಂಧಪಟ್ಟ ರಾಜ್ಯ, ಜಿಲ್ಲಾಡಳಿತಗಳು ನೋಡಿಕೊಳ್ಳಬೇಕಾಗಿದೆ. ಕಾರ್ಯನಿರ್ವಹಿಸಲು ಅನುಮತಿ ದೊರೆತ ಕಾರ್ಯಾಲಯಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವಲ್ಲಿ ಆಯಾ ರಾಜ್ಯ, ಜಿಲ್ಲಾಡಳಿತಗಳ ಹೊಣೆಯಾಗಿರುತ್ತದೆ ಎಂದು ಕೇಂದ್ರ ಮಡಿಕೇರಿ, ಏ. 15: ಈಗಾಗಲೇ ಮೇ 3 ರವರೆಗೆ ಲಾಕ್‍ಡೌನ್ ಅವಧಿಯನ್ನು ದೇಶದಾದ್ಯಂತ ವಿಸ್ತರಿಸಲಾಗಿದೆ. ಏಪ್ರಿಲ್ 20 ರವರೆಗೆ ಕಟ್ಟುನಿಟ್ಟಾಗಿ ಲಾಕ್‍ಡೌನ್ ನಿಯಮಗಳನ್ನು ಪಾಲಿಸುವಂತೆ ಪ್ರಧಾನಿ ಮೋದಿಯವರು ತಾ.14 ರಂದು ಕರೆ ನೀಡಿದ್ದರು. ತಾ. 20 ರ ನಂತರ ನಿಯಮಗಳಲ್ಲಿ ಅಲ್ಪ ಪ್ರಮಾಣದ ಸಡಿಲಿಕೆಗಳನ್ನು ತರಲಾಗುವುದೆಂದೂ ಪ್ರಧಾನಿ ತಿಳಿಸಿದ್ದರು.ಲಾಕ್‍ಡೌನ್‍ನಿಂದಾಗಿ ಸಾರ್ವಜನಿಕರು ಅನುಭವಿಸುತ್ತಿರುವ ಕಷ್ಟಗಳಿಂದಾಗಿ ತಾ.20 ರ ನಂತರ ಕೆಲವು ಚಟುವಟುಕೆಗಳಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಚಟುವಟಿಕೆಗಳ ಉಸ್ತುವಾರಿಯನ್ನು ಸಂಬಂಧಪಟ್ಟ ರಾಜ್ಯ, ಜಿಲ್ಲಾಡಳಿತಗಳು ನೋಡಿಕೊಳ್ಳಬೇಕಾಗಿದೆ.

ಕಾರ್ಯನಿರ್ವಹಿಸಲು ಅನುಮತಿ ದೊರೆತ ಕಾರ್ಯಾಲಯಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವಲ್ಲಿ ಆಯಾ ರಾಜ್ಯ, ಜಿಲ್ಲಾಡಳಿತಗಳ ಹೊಣೆಯಾಗಿರುತ್ತದೆ ಎಂದು ಕೇಂದ್ರ ಕೆಲಸಗಳಿಗೆ ಅವಕಾಶವಿರುತ್ತದೆ. ಕಾರ್ಮಿಕರು ಮುಖ ಗವಸ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಇಲ್ಲಿ ಪ್ರಾಮುಖ್ಯತೆ ನೀಡಬೇಕಾಗಿದೆ. ಇಲ್ಲಿ ಜಲಸಂರಕ್ಷಣೆ ಹಾಗೂ ನೀರಾವರಿ ಕೆಲಸಗಳಿಗೆ ಪ್ರಾಮುಖ್ಯತೆ.

* ಎಲ್ಲಾ ರೀತಿಯ ಸರಕು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಇದರಲ್ಲಿ ಇಬ್ಬರು ಪರವಾನಗಿ ಸಹಿತ ಚಾಲಕರಿಗೆ ಹಾಗೂ ಒಬ್ಬ ಕ್ಲೀನರ್‍ಗೆ ಮಾತ್ರ ಅನುಮತಿ.

* ಲಾರಿ ದುರಸ್ತಿ ಸಂಬಂಧ ಅಂಗಡಿಗಳು ಹಾಗೂ ಹೆದ್ದಾರಿ ಡಾಬಾಗಳಿಗೆ ಅವಕಾಶ.

* ಕಿರಾಣಿ (ದಿನಸಿ) ಅಂಗಡಿಗಳು ತೆರೆಯಲು ಅವಕಾಶ.

* ಐ.ಟಿ. ಕಂಪನಿಗಳು ಶೇಕಡ 50 ರಷ್ಟು ನೌಕರರ ಹಾಜರಿಯಲ್ಲಿ ಕಾರ್ಯನಿರ್ವಹಿಸಬಹುದು.

* ಗ್ರಾಮೀಣ ಪ್ರದೇಶಗಳಲ್ಲಿರುವ ಕೈಗಾರಿಕೆಗಳು; ಅಂದರೆ, ಪುರಸಭೆ ವ್ಯಾಪ್ತಿಯಿಂದ ಹೊರಗಿರುವ ಕೈಗಾರಿಕೆಗಳು ಕಾರ್ಯನಿರ್ವಹಿಸಬಹುದು.

* ‘(SಇZ) Sಠಿeಛಿiಚಿಟ ಇಛಿoಟಿomiಛಿ Zoಟಿes’ ಹಾಗೂ ‘(ಇಔU) ಇxಠಿoಡಿಣ ಔಡಿieಟಿಣeಜ Uಟಿiಣs’ಗಳ ಉತ್ಪಾದನಾ ಹಾಗೂ ಇತರ ಕೈಗಾರಿಕಾ ಸಂಸ್ಥೆಗಳು ಕಾರ್ಯನಿರ್ವಹಿಸಬಹುದಾಗಿದೆ.

* ಪುರಸಭೆಗಳ ವ್ಯಾಪ್ತಿಯ ಹೊರಗೆ ಇರುವ ಇಟ್ಟಿಗೆ ತಯಾರಿಕಾ ಕೇಂದ್ರಗಳು ಕಾರ್ಯನಿರ್ವಹಿಸಬಹುದು.

* ಪುರಸಭೆಗಳ ವ್ಯಾಪ್ತಿಯ ಹೊರಗೆ ನಡೆಯಬೇಕಾದ ರಸ್ತೆ ಕಾಮಗಾರಿಗಳು, ನೀರಾವರಿ ಯೋಜನೆಗಳು, ಕಟ್ಟಡ ಕಾಮಗಾರಿಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನೊಳಗೊಂಡ ಇತರ ಕೈಗಾರಿಕಾ ಯೋಜನೆಗಳಿಗೆ ಅವಕಾಶ.

* ಪುರಸಭೆಗಳ ಒಳಮಿತಿಯಲ್ಲಿಯೇ ಬಾಕಿ ಇರುವ ಕಾಮಗಾರಿಗಳು ಮುಂದುವರಿಸಬಹುದಾಗಿದೆ. ಆದರೆ, ಇಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಸಂಬಂಧಪಟ್ಟ ವ್ಯಾಪ್ತಿಯಲ್ಲಿಯೇ ಲಭ್ಯವಿರಬೇಕು. ಯಾವುದೇ ಕಾರಣಕ್ಕೂ ಹೊರಪ್ರದೇಶಗಳಿಂದ ಕಾರ್ಮಿಕರನ್ನು ಕರೆತಂದು ಕೆಲಸ ನಿರ್ವಹಿಸುವುದು ನಿಷೇಧಿಸಲಾಗಿದೆ.

* ವೈದ್ಯಕೀಯ ಹಾಗೂ ಪಶು ವೈದ್ಯಕೀಯಕ್ಕೆ ಸಂಬಂಧಪಟ್ಟ ತುರ್ತು ಸಂದರ್ಭ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಖಾಸಗಿ ಚತುಶ್ಚಕ್ರ ವಾಹನಗಳÀ ಸಂಚಾರಕ್ಕೆ ಅವಕಾಶವಿರುತ್ತದೆ. ಆದರೆ ಇಲ್ಲಿ ಚಾಲಕನನ್ನು ಹೊರತು ಪಡಿಸಿ ಇನ್ನೋರ್ವ ಪ್ರಯಾಣಿಕನಿಗೆ ಮಾತ್ರ ಅನುಮತಿ ಇದೆ. ಖಾಸಗಿ ದ್ವಿಚಕ್ರ ವಾಹನವಾದಲ್ಲಿ ಚಾಲಕನಿಗೆ ಮಾತ್ರ ಅನುಮತಿ.

ತಾ.20 ರ ನಂತರ ನಿಯಮಗಳನ್ನು ಸಡಿಲಗೊಳಿಸಿ ಅನುಮತಿ ದೊರೆತ ಕೆಲ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿರ್ಬಂಧಿತ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.