ಸೋಮವಾರಪೇಟೆ,ಏ.16: ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಪಡೆದು ಸ್ಥಳ ತನಿಖೆಗೆ ತೆರಳಿದ್ದ ಸೋಮವಾರಪೇಟೆ ಸಬ್ ಡಿವಿಷನ್‍ನ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಎಕ್ಸೈಜ್ ಅಧಿಕಾರಿ ಮೇಲೆ, ಅದೇ ಅಬಕಾರಿ ಇಲಾಖೆಯ ರೇಂಜ್ ಇನ್ಸ್‍ಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಆಲೂರುಸಿದ್ದಾಪುರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆ ಆಲೂರುಸಿದ್ದಾಪುರದಲ್ಲಿರುವ ವೈಭವ್ ವೈನ್ ಶಾಪ್‍ಗೆ ತೆರಳಿದ ಸೋಮವಾರ ಪೇಟೆ ಸಬ್ ಡಿವಿಷನ್‍ನ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಎಕ್ಸೈಜ್ ಸೋಮವಾರಪೇಟೆ,ಏ.16: ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಪಡೆದು ಸ್ಥಳ ತನಿಖೆಗೆ ತೆರಳಿದ್ದ ಸೋಮವಾರಪೇಟೆ ಸಬ್ ಡಿವಿಷನ್‍ನ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಎಕ್ಸೈಜ್ ಅಧಿಕಾರಿ ಮೇಲೆ, ಅದೇ ಅಬಕಾರಿ ಇಲಾಖೆಯ ರೇಂಜ್ ಇನ್ಸ್‍ಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಆಲೂರುಸಿದ್ದಾಪುರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆ ಆಲೂರುಸಿದ್ದಾಪುರದಲ್ಲಿರುವ ವೈಭವ್ ವೈನ್ ಶಾಪ್‍ಗೆ ತೆರಳಿದ ಸೋಮವಾರ ಪೇಟೆ ಸಬ್ ಡಿವಿಷನ್‍ನ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಎಕ್ಸೈಜ್ ಅದರಂತೆ ಅಧಿಕಾರಿ ಶಿವಪ್ಪ ಹಾಗೂ ಸಬ್ ಇನ್ಸ್‍ಪೆಕ್ಟರ್ ಅಪೂರ್ವ ಸೇರಿದಂತೆ ಮೂವರು ಸಿಬ್ಬಂದಿಗಳು ಆಲೂರುಸಿದ್ದಾಪುರಕ್ಕೆ ತೆರಳಿ ವೈಭವ್ ವೈನ್ ಶಾಪ್‍ನ್ನು ಪರಿಶೀಲನೆ ನಡೆಸಲು ಮುಂದಾಗಿದ್ದು, ಈ ಸಂದರ್ಭ ಬೀಗ ತೆಗೆಯುವಂತೆ ಮಾಲೀಕ ತಮ್ಮಯ್ಯ ಅವರಿಗೆ ಸೂಚಿಸಿದ್ದಾರೆ.

‘ವೈನ್ ಶಾಪ್‍ನ ಬೀಗದ ಕೀಲಿಕೈಯನ್ನು ಅಬಕಾರಿ ರೇಂಜ್ ಇನ್ಸ್‍ಪೆಕ್ಟರ್ ನಟರಾಜ್ ಅವರು ತೆಗೆದುಕೊಂಡು ಹೋಗಿದ್ದಾರೆ’ ಎಂದು ತಮ್ಮಯ್ಯ ಸಬೂಬು ನೀಡಿದ್ದಾರೆ. ಅವರಿಂದ ಕೀಲಿಕೈ ಪಡೆದು ವೈನ್‍ಶಾಪ್‍ನ ಬಾಗಿಲು ತೆರೆಯಿರಿ, ನಿಮ್ಮ ಅಂಗಡಿಯ

(ಮೊದಲ ಪುಟದಿಂದ) ವಿರುದ್ಧ ದೂರುಗಳು ಸಲ್ಲಿಕೆಯಾಗಿದ್ದು, ಸ್ಟಾಕ್ ಪರಿಶೀಲಿಸಬೇಕು ಎಂದು ಅಧಿಕಾರಿ ಶಿವಪ್ಪ ತಿಳಿಸಿದ್ದಾರೆ.

ಇದಾಗಿ ಒಂದು ಗಂಟೆಗಳ ತರುವಾಯ ಸ್ಥಳಕ್ಕೆ ಆಗಮಿಸಿದ ಮಫ್ತಿಯಲ್ಲಿದ್ದ ಅಬಕಾರಿ ಇನ್ಸ್‍ಪೆಕ್ಟರ್ ನಟರಾಜ್ ಅವರು ಜೀಪಿನಿಂದ ಇಳಿಯುತ್ತಿದ್ದಂತೆ, ಶಿವಪ್ಪ ಅವರ ಜೀಪಿನ ಚಾಲಕ ಭುವನೇಶ್ವರ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಇದರಿಂದ ತಬ್ಬಿಬ್ಬಾದ ಅಧಿಕಾರಿ ಶಿವಪ್ಪ ಅವರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ ಸಂದರ್ಭ, ನಟರಾಜ್ ಅವರು ಸಮವಸ್ತ್ರ ಧರಿಸಿದ್ದ ಶಿವಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭ ನಟರಾಜ್ ಅವರ ಜೀಪಿನ ಚಾಲಕ, ಹೊರಗುತ್ತಿಗೆ ಆಧಾರದಲ್ಲಿರುವ ನೌಕರ ಮನೋಹರ್ (ಮನು) ಎಂಬಾತನೂ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಎಕ್ಸೈಜ್ ಅಧಿಕಾರಿಯ ಮುಖಕ್ಕೆ ಹಲ್ಲೆ ನಡೆಸಿ, ನಿಂದಿಸಿದ್ದಾನೆ.

ಹೊರಗುತ್ತಿಗೆ ಆಧಾರದ ಮೇಲೆ ದಿನಗೂಲಿ ನೌಕರನಾಗಿರುವ ಮನು ಸಹ ಸಮವಸ್ತ್ರ ಧರಿಸಿರುವ ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಸಂದರ್ಭ ಇತರ ಅಧಿಕಾರಿಗಳು ಕೈಚೆಲ್ಲಿ ನಿಂತಿದ್ದಾರೆ. ಇಲಾಖೆಯ ಮೇಲಧಿಕಾರಿಯ ಮೇಲೆ ಹಲ್ಲೆ ನಡೆಸಿದ ಮನು, ‘ಏನ್ ಮಾಡ್ತೀರಾ ಮಾಡ್ಕೊಳ್ಳಿ’ ಎಂದು ಸವಾಲಾಕಿದ್ದಾನೆ.

ಸಮವಸ್ತ್ರ ಧರಿಸಿದ್ದ ಅಬಕಾರಿ ಇಲಾಖಾಧಿಕಾರಿಗಳು ಮತ್ತು ಸಮವಸ್ತ್ರ ಧರಿಸದೇ ಬಂದಿದ್ದ ಇನ್ಸ್‍ಪೆಕ್ಟರ್ ಹಾಗೂ ಜೀಪಿನ ಚಾಲಕನ ಆಟಾಟೋಪಗಳನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್‍ಲೋಡ್ ಮಾಡುತ್ತಿದ್ದಂತೆ ವೀಡಿಯೋಗಳು ವೈರಲ್ ಆಗಿವೆ. ಅಬಕಾರಿ ಇನ್ಸ್‍ಪೆಕ್ಟರ್ ಮತ್ತು ಚಾಲಕನ ನಡವಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಬೀದಿಯಲ್ಲಿ ರಂಪಾಟ ನಡೆಸಿರುವವರನ್ನು ಜಿಲ್ಲೆಯಿಂದಲೇ ಹೊರಕಳುಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ದೂರು ದಾಖಲು: ಘಟನೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಡಿವೈಎಸ್‍ಇ ಶಿವಪ್ಪ ಅವರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರ್ತವ್ಯಕ್ಕೆ ತೆರಳಿದ್ದ ಸಂದರ್ಭ ಅಬಕಾರಿ ಇನ್ಸ್‍ಪೆಕ್ಟರ್ ನಟರಾಜ್, ಹೊರಗುತ್ತಿಗೆ ಆಧಾರದಲ್ಲಿರುವ ಚಾಲಕ ಮನೋಹರ್ (ಮನು), ಗಾರ್ಡ್‍ಗಳಾದ ವೀರೇಶ್, ಕಾಂತರಾಜು ಅವರುಗಳು ತನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದರೊಂದಿಗೆ ಚಾಲಕ ಭುವನೇಂದ್ರ ಅವರ ಮೇಲೂ ತೀವ್ರ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ್ದು, ಇದರ ಆಧಾರದ ಮೇರೆ ನಾಲ್ವರ ವಿರುದ್ಧ ಶನಿವಾರಸಂತೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪ್ರತಿದೂರು: ಇಡೀ ಘಟನೆಗಳ ವೀಡಿಯೋ ಚಿತ್ರೀಕರಣದಲ್ಲಿ ತಪ್ಪು ಯಾರದೆಂಬ ಬಗ್ಗೆ ಮೇಲ್ನೋಟಕ್ಕೆ ಸ್ಪಷ್ಟತೆಯಿದ್ದರೂ ಸಹ, ಅಬಕಾರಿ ಇಲಾಖೆಯ ಇನ್ಸ್‍ಪೆಕ್ಟರ್ ನಟರಾಜ್ ಅವರು ಶನಿವಾರಸಂತೆ ಠಾಣೆಯಲ್ಲಿ ಪ್ರತಿದೂರು ಸಲ್ಲಿಸಿದ್ದಾರೆ. ಕರ್ತವ್ಯ ನಿಮಿತ್ತ ಆಲೂರುಸಿದ್ದಾಪುರಕ್ಕೆ ತೆರಳಿದ ಸಂದರ್ಭ ತನ್ನ ಮೇಲೆ ಇಲಾಖೆಯ ಡಿವೈಎಸ್‍ಇ ಶಿವಪ್ಪ ಸೇರಿದಂತೆ ಇತರರು ಚಾಕೂನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇವರ ದೂರನ್ನೂ ಸಹ ಸ್ವೀಕರಿಸಿರುವ ಠಾಣಾಧಿಕಾರಿ ಕೃಷ್ಣನಾಯಕ್ ಅವರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಠಾಣಾಧಿಕಾರಿಗಳು, ಶಿವಪ್ಪ ಅವರು ನೀಡಿದ ದೂರಿನ ಮೇರೆ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ನಟರಾಜ್ ಅವರೂ ಸಹ ಪ್ರತಿದೂರು ನೀಡಿದ್ದಾರೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.

ಒಟ್ಟಾರೆ ಅಕ್ರಮವನ್ನು ಪರಿಶೀಲಿಸಲು ತೆರಳಿದ ಅಧಿಕಾರಿಗಳ ಮೇಲೆಯೇ ಅದೇ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಲ್ಲೆ ನಡೆಸಿರುವ ವಿಚಿತ್ರ ಘಟನೆಗಳಿಗೆ ಆಲೂರುಸಿದ್ದಾಪುರ ಸಾಕ್ಷಿಯಾಗಿದ್ದು, ವೈನ್ ಶಾಪ್‍ನ ಮಾಲೀಕರಿಗೂ ಇಲಾಖೆಯ ಇನ್ಸ್‍ಪೆಕ್ಟರ್ ಮತ್ತು ಚಾಲಕನಿಗೂ ಇರುವ ಸಂಬಂಧದ ಬಗ್ಗೆ ಸಂಶಯ ಮೂಡುವಂತಾಗಿದೆ.