ಮಡಿಕೇರಿ, ಏ. 13: ಕೊರೊನಾ ಕಾರಣದಿಂದಾಗಿ ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳ ಅವಧಿಯ ತನಕ ಲಾಕ್‍ಡೌನ್ ಪರಿಸ್ಥಿತಿಯಿಂದಾಗಿ ಮುಚ್ಚಲ್ಪಟ್ಟಿದ್ದ ಮಾಂಸ - ಮೀನು ವ್ಯಾಪಾರಕ್ಕೆ ತಾ. 13ರಂದು ಅವಕಾಶ ದೊರೆತಿತ್ತು. ಅನಿವಾರ್ಯ ಪರಿಸ್ಥಿತಿಯಿಂದಾಗಿ ಜಿಲ್ಲೆಯಲ್ಲಿ ಮಾಂಸ - ಮೀನು ಪ್ರಿಯರು ತಮ್ಮ ಈ ಅಭಿರುಚಿಯನ್ನು ಅದುಮಿಕೊಳ್ಳುವಂತಾಗಿತ್ತು. ಕೊಡಗು ಜಿಲ್ಲೆ ಹೇಳಿ - ಕೇಳಿ ಮದ್ಯ ಹಾಗೂ ಮಾಂಸಾಹಾರದ ಭಕ್ಷ್ಯ ಭೋಜನಗಳಿಗೆ ಹೆಸರಾಗಿದ್ದು, ಕೊರೊನಾ ಹೆಮ್ಮಾರಿಯಿಂದಾಗಿ ಇವುಗಳಿಗೆ ‘ಬ್ರೇಕ್ ಬಿದ್ದಿತ್ತು. ಇದರಿಂದಾಗಿ ಮಾಂಸ - ಮೀನು ಪ್ರಿಯರು ಮಾತ್ರವಲ್ಲ ಈ ವ್ಯಾಪಾರವನ್ನು ಅವಲಂಬಿಸಿ ಬದುಕು ಕಂಡುಕೊಳ್ಳುತ್ತಿದ್ದವರೂ ಹಲವಷ್ಟು ದಿನಗಳ ಕಾಲ ಸಂಕಷ್ಟ ಅನುಭವಿಸುವಂತಾಗಿತ್ತು. ಇದೀಗ ಈ ತನಕ ಇದ್ದ ನಿರ್ಬಂಧವನ್ನು ಜಿಲ್ಲಾಡಳಿತ ಸಡಿಲಗೊಳಿಸಿ ವಾರದಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ತರಕಾರಿ, ಹಣ್ಣು ಹಂಪಲು, ದಿನಸಿ ಪದಾರ್ಥಗಳ ವಹಿವಾಟಿನೊಂದಿಗೆ ಮಾಂಸ - ಮೀನು ಮಾರಾಟಕ್ಕೂ ಬೆ. 6ರಿಂದ ಅಪರಾಹ್ನ 12ರ ತನಕ ಅವಕಾಶವನ್ನು ಕಲ್ಪಿಸಿತ್ತು.ನಿರ್ಬಂಧ ಸಡಿಲಿಕೆಯ ಮೊದಲದಿನವಾಗಿದ್ದ ಇಂದು ಮಾಂಸಾಹಾರಿಗಳು, ವ್ಯಾಪಾರಸ್ಥರು ಒಂದಷ್ಟು (ಮೊದಲ ಪುಟದಿಂದ) ಲವಲವಿಕೆಯೊಂದಿಗೆ ಕಂಡುಬಂದರು. ನಿಗದಿತ ಅವಧಿಯಲ್ಲಿ ಹೆಚ್ಚು ಮಾರಾಟಕ್ಕೆ ವ್ಯಾಪಾರಿಗಳು ಪೈಪೋಟಿ ನಡೆಸಿದರೆ ಮಾಂಸ ಕೊಳ್ಳಲು ಆಗಮಿಸಿದ್ದ ಮಂದಿ ತರಾತುರಿಯಲ್ಲಿ ತಮ್ಮಿಷ್ಟದ ಕೋಳಿ, ಕುರಿ, ಹಂದಿ, ಮೀನು ಮಾಂಸವನ್ನು ಪಡೆದುಕೊಳ್ಳಲು ಮುಂದಾಗಿದ್ದರು. ಕೆಲವಾರು ಅಂಗಡಿಗಳ ಎದುರು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಸಾಲಿನಲ್ಲಿ ನಿಂತು ಬೇಕಾದ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದುದು ಕಂಡುಬಂದಿತು. ಶುಚಿತ್ವ ಕಾಪಾಡುವ ಮೂಲಕ ನಿಗದಿತ ಅವಧಿಯಲ್ಲಿ ಮಾತ್ರ ವ್ಯಾಪಾರ - ವಹಿವಾಟಿಗೆ ಅವಕಾಶವಿದ್ದ ಕಾರಣದಿಂದಾಗಿ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿರುಸಿನ ವ್ಯಾಪಾರ ನಡೆದಿತ್ತು.

ಮಾಂಸಾಹಾರ ಇಷ್ಟಪಡುವ ಮನುಷ್ಯರು ಮಾತ್ರವಲ್ಲ ಸಾಕು ಪ್ರಾಣಿಗಳಾದ ಮೆಚ್ಚಿನ ನಾಯಿ- ಬೆಕ್ಕುಗಳಿಗೂ ಈ ತನಕ ಮಾಂಸಾಹಾರವನ್ನು ಒದಗಿಸಲಾಗದೆ ಇದನ್ನು ಸಾಕುತ್ತಿದ್ದವರು ಚಡಪಡಿಸುತ್ತಿದ್ದರು. ಇದೀಗ ಸುದೀರ್ಘ ಅಂತರದ ಬಳಿಕ ಮಾಂಸ - ಮೀನು ವಹಿವಾಟಿಗೆ ಲಭ್ಯವಾದ ಅವಕಾಶದಲ್ಲಿ ಮಾಂಸಾಹಾರ ಪ್ರಿಯರು ಸಂಕಷ್ಟದ ನಡುವೆಯೂ ಒಂದಷ್ಟು ‘ತೃಪ್ತಿ’ ಪಟ್ಟುಕೊಂಡರೆ ವ್ಯಾಪಾರಿಗಳು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.

ಮೊದಲ ದಿನದ ವ್ಯಾಪಾರ ಚೆನ್ನಾಗಿತ್ತು. ಆದರೆ ಸಮಯದ ನಿರ್ಬಂಧ ಹಾಗೂ ಮರುದಿನ ವ್ಯಾಪಾರದ ಅವಕಾಶ ಇಲ್ಲದ ಕಾರಣ ಹೆಚ್ಚು ವಹಿವಾಟು ನಡೆಸುವುದು ವ್ಯಾಪಾರಿಗಳಿಗೆ ಸಾಧ್ಯವಿರಲಿಲ್ಲ. ಇದರಿಂದ ಗ್ರಾಹಕರಿದ್ದರೂ ಮಾಂಸದ ಕೊರತೆ ಎದುರಾಗಿತ್ತು. ಬೆಳಿಗ್ಗೆ 10.30-11ರ ವೇಳೆಗಾಗಲೇ ಎಲ್ಲವೂ ಖಾಲಿಯಾಗಿತ್ತು ಎಂದು ಮಡಿಕೇರಿಯ ಕೊಹಿನೂರ್ ಜಂಕ್ಷನ್‍ನಲ್ಲಿರುವ ಕೂರ್ಗ್ ಸ್ಪೆಷಲ್ (ವೆಸ್ಟ್ ಎಂಡ್) ಮಾಂಸ ಮಾರಾಟ ಮಳಿಗೆಯ ವ್ಯಾಪಾರಿ ವೇಣು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.

ಗ್ರಾಹಕರಿಗೆ ‘ಒನ್ ವೇ’

ಸಾಮಾನ್ಯವಾಗಿ ವಾಹನ ದಟ್ಟಣೆÉ ನಿಯಂತ್ರಿಸಲು ರಸ್ತೆಗಳಲ್ಲಿ ‘ಒನ್ ವೇ’ ನಿಯಮ ಪಾಲಿಸುವುದು ಸಹಜ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಗರದ ಬಸ್ ತಂಗುದಾಣದಲ್ಲಿಂದು ಪಾದಚಾರಿ ಗ್ರಾಹಕರಿಗೆ ‘ಒನ್ ವೇ’ ನಿಯಮ ಪಾಲಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಸ್‍ಗಳು ನಿಲ್ದಾಣದ ಒಳಗೆ ಪ್ರವೇಶಿಸುವ ದಾರಿಯಲ್ಲ ಗ್ರಾಹಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಪ್ರವೇಶಿಸುತ್ತಿದ್ದ ಸ್ಥಳದಿಂದ ಗ್ರಾಹಕರಿಗೆ ನಿರ್ಗಮನ ಕಲ್ಪಿಸಲಾಗಿತ್ತು. ಇದರಿಂದಾಗಿ ವ್ಯಾಪಾರ, ವಹಿವಾಟು ಸುಸೂತ್ರವಾಗಿ ನಡೆಯಿತು.

ಖಾಸಗಿ ಬಸ್ ನಿಲ್ದಾಣಕ್ಕೆ ಬಾರದ ಗ್ರಾಹಕರು

ಒಂದೇ ಕಡೆ ಜನದಟ್ಟಣೆ ಆಗದಂತೆ ಇಂದು ಖಾಸಗಿ ಬಸ್ ನಿಲ್ದಾಣದಲ್ಲೂ ತರಕಾರಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಲ್ಲಿ ಗ್ರಾಹಕರೇ ಬಾರದೆ ಇದ್ದದ್ದರಿಂದ ಕೆಲ ತರಕಾರಿ ವ್ಯಾಪಾರಸ್ಥರಿಗೆ ದಿನದ ಬೋಣಿಯೂ ಆಗದಿರುವ ಪರಿಸ್ಥಿತಿ ಎದುರಾಯಿತು.

ಬೇಕರಿಗಳಲ್ಲಿ ಕಡಿಮೆ ವ್ಯಾಪಾರ

ಜಿಲ್ಲಾಡಳಿತ ಬೇಕರಿ ತೆರೆಯಲು ಅವಕಾಶ ಕಲ್ಪಿಸಿದ್ದರೂ ಜನರಿಗೆ ಇಂದು ಬೇಕರಿ ಸಾಮಗ್ರಿ ಖರೀದಿಸಲು ಆಸಕ್ತಿ ಇಲ್ಲದಿದ್ದ ಹಾಗೆ ಕಾಣುತ್ತಿತ್ತು.

ಬೇಕರಿ ತೆರೆದಿರುವ ವಿಷಯ ಹೆಚ್ಚಿನ ಜನರಿಗೆ ತಿಳಿಯದೆ ಇದ್ದ ಕಾರಣ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಲ್ಲ. ಇಷ್ಟು ದಿನ ಬೇಕರಿ ತೆರೆಯದೆ ಇದ್ದ ಕಾರಣ ಪಫ್ಸ್, ಸಮೋಸ ಮುಂತಾದ ಆಹಾರ ಪದಾರ್ಥಗಳನ್ನು ತಯಾರಿ ಮಾಡಿರಲಿಲ.್ಲ ಇದರಿಂದಾಗಿ ಬರಿ ಪ್ಯಾಕ್ಡ್ ಪದಾರ್ಥಗಳಾದ ಕಂಪನಿಯ ಬಿಸ್ಕೆಟ್, ಜೂಸ್‍ಗಳು ಮಾತ್ರ ಲಭ್ಯವಿದ್ದು ಇದನ್ನು ಗ್ರಾಹಕರು ಖರೀದಿಸಿದರು. ಮೊದಲಿಗೆ ಬೇಕರಿಯನ್ನು ಶುಚಿಗೊಳಿಸಿ ನಂತರ ವ್ಯಾಪಾರ ಪ್ರಾರಂಭಿಸಿದೆನು ಎಂದು ನಗರದ ಕೈಗಾರಿಕಾ ಬಡಾವಣೆಯ ‘ಸಫಾ’ ಬೇಕರಿಯ ಮಾಲೀಕ ಅಶ್‍ರಫ್ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿದರು. ಕೆಲವು ಬೇಕರಿಗಳಲ್ಲಿ ಅರ್ಧ ಶಟರ್ ಮುಚ್ಚಿಕೊಂಡು ಶುಚಿಗೊಳಿಸುತ್ತಿದ್ದ ದೃಶ್ಯವೂ ಕಂಡು ಬಂತು.

ನಾಪೆÇೀಕ್ಲುವಿನಲ್ಲಿ ಕಿಕ್ಕಿರಿದ ಜನ ಸಂದಣಿ

ನಾಪೆÇೀಕ್ಲು ಪಟ್ಟಣದಲ್ಲಿ ಇಂದು ಕಿಕ್ಕಿರಿದ ವಾಹನ ದಟ್ಟಣೆ, ಜನ ಸಂದಣಿ ಕಂಡು ಬಂತು. ಸಾರ್ವಜನಿಕರು ಮೀನು ಮಾಂಸ ಖರೀದಿಸಲು ಮುಗಿ ಬೀಳುತ್ತಿರುವದು ಗೋಚರಿಸಿತು.

ನ್ಯಾಯಬೆಲೆ ಅಂಗಡಿ, ಬ್ಯಾಂಕುಗಳಲ್ಲಿ ಗ್ರಾಹಕರು ಕಿಕ್ಕಿರಿದು ನೆರೆದಿದ್ದರು. ಹೆಚ್ಚಿನ ಜನ ಮಾಸ್ಕ್ ಕೂಡ ಧರಿಸದೇ ಇರುವದು ಕಂಡು ಬಂತು. ಹೆಚ್ಚಿದ ಜನ ದಟ್ಟಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವಕಾಶವೇ ದೊರೆಯಲಿಲ್ಲ. ಪೆÇಲೀಸರು ವಾಹನ ಮತ್ತು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಖರೀದಿಗೆ 12 ಗಂಟೆ ಸಮಯ ನೀಡಿದ್ದರೂ ಹೆಚ್ಚಿದ ಜನ ಸಂದಣಿಯಿಂದ ವ್ಯಾಪಾರಸ್ಥರು ಅಂಗಡಿ ಮುಚ್ಚಲು ಶ್ರಮ ಪಡಬೇಕಾಯಿತು. 12.30 ಗಂಟೆ ಕಳೆದರೂ ಬ್ಯಾಂಕಿನ ಎದುರು ನಿಂತಿದ್ದ ಗ್ರಾಹಕರ ಸಂಖ್ಯೆ ಕಡಿಮೆಯಾಗಲಿಲ್ಲ. ಒಟ್ಟಿನಲ್ಲಿ ನಾಪೆÇೀಕ್ಲು ಪಟ್ಟಣ ಜನ ಜಾತ್ರೆಯಾಗಿತ್ತು.