ಶನಿವಾರಸಂತೆ, ಏ. 11: ಶನಿವಾರಸಂತೆ ಗಡಿಭಾಗವಾದ ಹೊಸೂರು ಗ್ರಾಮದ ಹೊಸಕೋಟೆ ಕಾಫಿ ತೋಟದಿಂದ ಒಂದು ಹಸುವಿನ ಮಾಂಸವನ್ನು ಚೀಲದಲ್ಲಿ ತುಂಬಿಕೊಂಡು ಮಾರಾಟ ಮಾಡಲು 5 ಮಂದಿ ಆರೋಪಿಗಳು ಮಹೇಂದ್ರ ಜೀಪು (ಕೆ.ಎ.-21, ಎಂ.-1150)ನಲ್ಲಿ ಶನಿವಾರಸಂತೆಗೆ ತೆಗೆದುಕೊಂಡು ಹೋಗುತ್ತಿರುವಾಗ ಗ್ರಾಮಸ್ಥರು ನೀಡಿದ ದೂರಿನ ಮೇರೆ ಯಸಳೂರು ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಬ್ಬಯ್ಯ ಹಾಗೂ ಸಿಬ್ಬಂದಿಗಳು ಧಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ಹೊಸೂರು ಗ್ರಾಮದ ಹೊಸಕೋಟೆ ಕಾಫಿ ತೋಟದಲ್ಲಿ ಗುರುವಾರ ಶನಿವಾರಸಂತೆಯ ಆರೋಪಿಗಳಾದ ಇರ್ಫಾನ್ ಪಾಶ, ವಾಸೀಂ, ಹಂಸರ್, ಸೈಯದ್ ಸಮೀರ್, ಅಜ್ಗರ್ ಎಂಬ ಐವರು ಗೋಮಾಂಸವನ್ನು ಗೋಣಿಚೀಲದಲ್ಲಿ ತುಂಬಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಶನಿವಾರಸಂತೆಗೆ ಜೀಪ್‍ನಲ್ಲಿ ಕೊಂಡೊಯ್ಯುತ್ತಿದ್ದರು. ಗ್ರಾಮಸ್ಥರ ದೂರಿನ ಮೇರೆ ಯಸಳೂರು ಪೊಲೀಸರು ಧಾಳಿನಡೆಸಿ ಐವರು ಆರೋಪಿಗಳನ್ನು ಬಂಧಿಸಿ ಜೀಪು ಹಾಗೂ ಗೋಮಾಂಸವನ್ನು ವಶಪಡಿಸಿ ಕೊಂಡು ಕರ್ನಾಟಕ ಗೋರಕ್ಷಣಾ ಕಾಯ್ದೆ ಮೇರೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಸಕಲೇಶಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

ಕಾರ್ಯಾಚರಣೆಯಲ್ಲಿ ಯಸಳೂರು ಪೊಲೀಸ್ ಠಾಣಾಧಿಕಾರಿ ಸುಬ್ಬಯ್ಯ, ಎ.ಎಸ್.ಐ. ದೇವರಾಜ್, ಸಿಬ್ಬಂದಿಗಳಾದ ಪ್ರತಾಪ್ ಇದ್ದರು.