ಮಡಿಕೇರಿ, ಏ. 10: ಕೃಷಿ ವಿಜ್ಞಾನ ಕೇಂದ್ರ ಮತ್ತು ಪುತ್ತರಿ ರೈತ ಉತ್ಪಾದಕರ ಸಂಘ ಗೋಣಿಕೊಪ್ಪಲು ಇವರುಗಳ ಸಹಯೋಗದಲ್ಲಿ ರೈತರು ಬೆಳೆದ ತರಕಾರಿಯನ್ನು ನೇರವಾಗಿ ಖರೀದಿಸಿ ಜಿಲ್ಲಾಡಳಿತ ನಿಗದಿ ಪಡಿಸಿದ ದರಕ್ಕಿಂತ ಕಡಿಮೆ ದರದಲ್ಲಿ ವಾರದ ಮೂರು ದಿನ ಬೆಳಿಗ್ಗೆ 8 ರಿಂದ 12 ಗಂಟೆಯ ತನಕ ಕೆ.ವಿ.ಕೆ. ಯ ಆವರಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸಮಯದಲ್ಲಿ ಸರ್ಕಾರ ಸೂಚಿಸಿದ ಎಲ್ಲಾ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಸಾಮಾಜಿಕ ಅಂತರವನ್ನು ಕಾಪಾಡುವುದು, ಕೈಗಳನ್ನು ಆಲ್ಕೋಹಾಲ್‍ನಿಂದ ಸ್ವಚ್ಛಗೊಳಿಸುವುದು ಮತ್ತು ಮುಖಕ್ಕೆ ಮಾಸ್ಕ್ ಧರಿಸಿ ವಿತರಿಸಲಾಗುತ್ತಿದೆ. ವಯಸ್ಸಾದ ನಾಗರಿಕರು ಸರದಿಯಲ್ಲಿ ನಿಲ್ಲಲು ಕಷ್ಟವಾಗುವುದನ್ನು ಮನಗಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕುಳಿತುಕೊಂಡು ಹೋಗಲು ಸಾಲಿನಲ್ಲಿ ಕುರ್ಚಿಗಳ ವ್ಯವಸ್ಥೆಯನ್ನು ಮಾಡಲಾಗಿದೆ.