ಮಡಿಕೇರಿ, ಏ. 10: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತದ ಆದೇಶದಂತೆ ನಗರದ ಅಶ್ವಿನಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್‍ಯೇತರ ಚಿಕಿತ್ಸೆಗಳಿಗಾಗಿ ಬಳಸಲಾಗುತ್ತಿದೆ. ಇದರ ಸದುಪ ಯೋಗವನ್ನು ಜನರು ಪಡೆದುಕೊಳ್ಳು ತ್ತಿದ್ದಾರೆ. ಲಾಕ್‍ಡೌನ್ ಕಫ್ರ್ಯೂ ಸಡಿಲಿಕೆ ಇರುವ ದಿನವಾದ ಇಂದು ಜನರು ಅಂತರ ಕಾಯ್ದುಕೊಂಡು ಸಾಲಿನಲ್ಲಿ ಚೀಟಿ ಪಡೆಯಲು ನಿಂತಿದ್ದರು. ಚಿಕಿತ್ಸಾ ವ್ಯವಸ್ಥೆಯು ಸುಸೂತ್ರವಾಗಿ ನಡೆಯುತ್ತಿರುವುದು ಕಂಡುಬಂತು. ಜಿಲ್ಲಾಸ್ಪತ್ರೆಯಲ್ಲಿ ದೊರಕುವ ಚಿಕಿತ್ಸಾ ಸೌಲಭ್ಯಗಳಾದ ಶಸ್ತ್ರ ಚಿಕಿತ್ಸೆ, ಇ.ಎನ್.ಟಿ, ಒ.ಪಿ.ಡಿ, ಲ್ಯಾಬ್, ಇ.ಸಿ.ಜಿ ಮುಂತಾದವು ಇಲ್ಲಿ ಲಭ್ಯವಿದೆ.

ಅಶ್ವಿನಿ ಆಸ್ಪತ್ರೆಯ ಸಂಪೂರ್ಣ ಸಹಕಾರವನ್ನು ಜಿಲ್ಲಾಡಳಿತ ಬಯಸಿದ್ದು, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಆದೇಶದಂತೆ, ಅಶ್ವಿನಿ ಆಸ್ಪತ್ರೆಯ ಸಿಬ್ಬಂದಿಗಳನ್ನೂ ಜಿಲ್ಲಾಸ್ಪತ್ರೆಯ ಸೇವೆಗಳಿಗೆ ಬಳಸಲಾಗುತ್ತಿದೆ. ಒಟ್ಟಿನಲ್ಲಿ ಇದು ಒಂದು ಸಂಪೂರ್ಣ ಜಿಲ್ಲಾಸ್ಪತ್ರೆ ಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ಕೊರೊನಾ ವಾರ್ಡ್ ಇರುವ ಆಸ್ಪತ್ರೆಯಿಂದ ದೂರವಿರುವ ತಾತ್ಕಾಲಿಕ ಜಿಲ್ಲಾಸ್ಪÀತ್ರೆಯಲ್ಲಿ ಜನರು ಯಾವುದೇ ಭಯವಿಲ್ಲದೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸಹಜ ಸಂಖ್ಯೆಯಲ್ಲಿ ಜನರ ಸ್ಪಂದನ

ಪ್ರಸ್ತುತ ಕೊರೊನಾ ಚಿಕಿತ್ಸೆಗಾಗಿಯೇ ಪ್ರತ್ಯೇಕಿಸಲ್ಪಟ್ಟ ಜಿಲ್ಲಾಸ್ಪತ್ರೆಯಿಂದ ದೂರವಿರುವ ಅಶ್ವಿನಿ ಆಸ್ಪತ್ರೆಯಲ್ಲಿ ಸಹಜ ಸಂಖ್ಯೆಯಲ್ಲಿ ಜನರು ಚಿಕೆತ್ಸೆಗಾಗಿ ಬರುತ್ತಿದ್ದಾರೆ. ತುರ್ತು ಸೇವೆ, ಆರೋಗ್ಯ ತಪಾಸಣೆ, ಹೀಗೆ ಇನ್ನಿತರ ಚಿಕಿತ್ಸೆಗೆ ಜನರು ಆಗಮಿಸುತ್ತಿದ್ದಾರೆ. ಸಣ್ಣ-ಪುಟ್ಟ ಶೀತ, ಜ್ವರಗಳಿಗೆ ಬರುವ ಜನರ ಸಂಖ್ಯೆ ಕಡಿಮೆ ಇದೆ. ಐ.ಸಿ.ಯು ವಾರ್ಡ್ ಶೀಘ್ರವಾಗಿ ಇಲ್ಲಿಗೆ ಸ್ಥಳಾಂತರವಾಗುತ್ತದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.ಬಹಳ ಶಿಸ್ತಿನಿಂದ ಆಸ್ಪತ್ರೆಗೆ ಬಂದ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದು ಇಂದು ಕಂಡುಬಂತು. ಮುನ್ನೆಚ್ಚರಿಕಾ ಕ್ರಮವಾಗಿ ಚಿತ್ರದಲ್ಲಿ ಕಾಣಿಸುವಂತೆ ಒಂದು ಕುರ್ಚಿ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳುವಂತೆ ಸೂಚನಾ ಫಲಕವನ್ನು ಲಗತ್ತಿಸಲಾಗಿದೆ.