ಮಡಿಕೇರಿ, ಏ. 9: ಇಂಟರ್‍ನೆಟ್, ಈ ಯುಗದ ಒಂದು ವರವೇ ಸರಿ. ಕೊರೊನಾದಿಂದ ಲಾಕ್‍ಡೌನ್ ಆಗಿರುವ ಈ ಪರಿಸ್ಥಿಸಿಯಲ್ಲಿ ಇಂಟರ್‍ನೆಟ್ ಜನರಿಗೆ ಕಾಲಹರಣ ಮಾಡುವ ಒಂದು ಮಾಧ್ಯಮವೂ ಆಗಿದೆಯಲ್ಲದೆ, ಅನೇಕರಿಗೆ ಆಪತ್ಭಂಧುವೂ ಆಗಿದೆ.ಕೊಡಗು ಲಾಕ್‍ಡೌನ್‍ಆಗಿ ಈಗ ಸುಮಾರು ಮೂರುವಾರಗಳು ಕಳೆದಿವೆ. ಲಾಕ್‍ಡೌನ್ ಆದ ಮೊದಲನೇ ವಾರ ನಾವೆಲ್ಲರೂ ಗಾಬರಿಯಿಂದಿದ್ದೆವಾದರೂ, ಈಗ ಲಾಕ್‍ಡೌನೇ ನಮಗಳ ನಿತ್ಯ ಜೀವನದ ಅಂಗವಾದಂತಾಗಿದೆ. ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳವುದನ್ನು ಕೊಡಗಿನವರಿಗೆ ಯಾರೂ ತಿಳಿಹೇಳಬೇಕಿಲ್ಲ.

ಬೆಂಗಳೂರಿನಂತಹ ಅನೇಕ ನಗರಗಳಲ್ಲಿ ಲಾಕ್‍ಡೌನ್ ಆದರೂ ಸಹ, ನಿವಾಸಿಗಳಿಗೆ ಅವಶ್ಯಕ ವಸ್ತುಗಳು ಆನ್‍ಲೈನ್ ಸೇವೆಯ ಮೂಲಕ ಲಭ್ಯವಾಗುತ್ತವೆ. ಆದರೆ, ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ಈ ಸೌಲಭ್ಯ ಲಭ್ಯವಿರಲಿಲ್ಲ. ಲಾಕ್‍ಡೌನ್ ಆದರೂ ಕೂಡ ನಿವಾಸಿಗಳು ಮನೆಯಿಂದ ಹೊರಗೆ ತೆರಳಿ ದಿನಬಳಕೆಯ ವಸ್ತುಗಳನ್ನು ಖರೀದಿಸುವ ಅನಿವಾರ್ಯತೆಯಿತ್ತು. ಇದನ್ನು ಅರಿತುಕೊಂಡ ಜಿಲ್ಲಾಡಳಿತÀ ಹಾಗೂ ಜಿಲ್ಲಾ ಪೊಲೀಸ್, ನಿವಾಸಿಗಳಿಗೆ ಅನುಕೂಲವಾಗುವಂತೆ ಆನಲೈನ್ ಸೌಲಭ್ಯ ಒದಗಿಸುವ ಸಲುವಾಗಿ ಞoಜಚಿguಟeಣsಣಚಿಡಿಣ.iಟಿ ವೆಬ್‍ಸೈಟ್ ಅನ್ನು ಪ್ರಾರಂಭಿಸಿತು.ಮೊದಲು ಹೋಂ ಡೆಲಿವರಿ ಸೌಲಭ್ಯ ಪ್ರಾರಂಭವಾಗದಿದ್ದರೂ, ನಿವಾಸಿಗಳು ಆನ್‍ಲೈನ್ ಮೂಲಕ ಸುಮಾರು 157 ಅಂಗಡಿಗಳಿಂದ ದಿನಸಿ ಬುಕ್‍ಮಾಡುವ ಅವಕಾಶ ಲಭ್ಯವಾಯಿತು. ಇದರಿಂದ ಅಂಗಡಿ ಮುಂಗಟ್ಟುಗಳಲ್ಲಿ ಜನರ ಗುಂಪು ಸುಧಾರಿಸಿತು. ಇನ್ನು ವೆಬ್‍ಸೈಟ್ ಪ್ರಾರಂಭವಾದ ಒಂದುವಾರದೊಳಗೆ ಕೊಡಗು ಚೇಂಬರ್ ಆಫ್ ಕಾಮರ್ಸ್‍ನ ಸದಸ್ಯರ ಸಹಾಯದಿಂದ ದಿನಸಿ ಹಾಗೂ ಅವಶ್ಯವಸ್ತುಗಳನ್ನು ಮನೆಗೇ ತಲುಪಿಸುವ ‘ಹೋಂ ಡೆಲಿವರಿ’ಯ ವ್ಯವಸ್ಥೆ ಕೊಡಗಿನಲ್ಲಿ ಮೊದಲಬಾರಿಗೆ ಅಸ್ತಿತ್ವಕ್ಕೆ ಬಂದಿದೆ.

ಮೊಬೈಲ್‍ನಿಂದ ಮೇಲೆ ತಿಳಿಸಿದಂತ ವೆಬ್‍ಸೈಟ್‍ಗೆ ಲಾಗಿನ್ ಮಾಡಿ ನಿಮಗೆ ಬೇಕಾದ ವಸ್ತುಗಳನ್ನು ಬುಕ್‍ಮಾಡಿದರೆ ಸಾಕು. ಸ್ವಯಂಸೇವಕರು ಈ ವಸ್ತುಗಳನ್ನು ತಮ್ಮ ನಿವಾಸಕ್ಕೆ ತಲುಪಿಸುವರು. ತಾವು ಖರೀದಿಸಿದ ವಸ್ತುಗಳಿಗೆ ಹಣ ಪಾವತಿಸಬೇಕೇ ಹೊರತು, ಹೋಂ ಡೆಲಿವರಿಯನ್ನು ಸ್ವಯಂ ಸೇವಕರು ಉಚಿತವಾಗಿ ಮಾಡುತ್ತಿದ್ದಾರೆ.

ಈಗ ಈ ಆನ್‍ಲೈನ್ ಸೌಲಭ್ಯ ಪ್ರಾರಂಭಗೊಂಡು ಸುಮಾರು ಎರಡು ವಾರಗಳಾಗಿದ್ದು, ದಿನಕ್ಕೆ ಸುಮಾರು 90 ಹೋಂ ಡೆಲಿವರಿಗಳು ಮಡಿಕೇರಿ, ಕುಶಾಲನಗರ, ವೀರಾಜಪೇಟೆ ಹಾಗೂ ಗೋಣಿಕೊಪ್ಪ ನಗರಗಳಲ್ಲಿ ಪ್ರತಿನಿತ್ಯ ನೆರವೇರುತ್ತಿದೆ. ಈ ಸೌಲಭ್ಯ ಹೆಚ್ಚಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗುತ್ತಿದೆ.

ಇನ್ನು, ಅಂತರ್‍ಜಾಲದ ವಿಸ್ಮಯ ಹೇಗಿದೆಯೆಂದರೆ, ಯುಕೆ ದೇಶದಲ್ಲಿರುವ ಕೊಡಗಿನೊಬ್ಬರು ಮನೆಯಲ್ಲಿರುವ ತಮ್ಮ ತಾಯಿಗೆ ಞoಜಚಿguಟeಣsಣಚಿಡಿಣ.iಟಿ ವೆಬ್‍ಸೈಟ್ ಮೂಲಕ ಸಾಮಗ್ರಿಗಳನ್ನು ಬುಕ್‍ಮಾಡಿರುತ್ತಾರೆ.

ಅದನ್ನು ಆಧರಿಸಿ ಚೇಂಬರ್ ಸ್ವಯಂಸೇವಕರು ಬುಧವಾರದಂದು ಬೋಯಿಕೇರಿಯಲ್ಲಿರುವ ಒಂದು ಮನೆಗೆ ವೆಬ್‍ಸೈಟ್‍ನಿಂದ ಬುಕ್ ಮಾಡಿದ್ದ ಸಾಮಗ್ರಿಗಳನ್ನು ಹೋಂ ಡೆಲಿವರಿ ಮಾಡಲು ಹೊರಟರು. ಮನೆಯಲ್ಲಿ

(ಮೊದಲ ಪುಟದಿಂದ) ಹಿರಿಯ ನಾಗರಿಕರಾದ ಕಾವೇರಮ್ಮನವರು ಸಾಮಗ್ರಿಗಳನ್ನು ಪಡೆದು ಅವುಗಳ ಹಣ ಪಾವತಿಸಿದರು. ನಂತರ ಸ್ವಯಂಸೇವಕರು ಅವರನ್ನು ಅವರ ಅನುಭವ ಕೇಳಿದಾಗ, ‘ನನ್ನ ಮಗ, ಚಂದ್ರಶೇಖರ ಯುನೈಟೆಡ್ ಕಿಂಗ್‍ಡಂ ದೇಶದಲ್ಲಿದ್ದಾನೆ. ಅವನು ಯುಕೆ ದೇಶದಿಂದ ನನಗೆ ಬೇಕಾದ ದಿನಬಳಕೆಯ ಸಾಮಗ್ರಿಗಳನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡಿದ. ಈಗ ಅದು ನನ್ನ ಕೈಸೇರಿದೆ’ ಎಂದು ತಿಳಿಸುತ್ತಾರೆ.

ಸ್ವಯಂಸೇವಕರ ಕಾರ್ಯಕ್ಕೆ ಕೃತಜ್ಞತೆ ಅರ್ಪಿಸುತ್ತಾ, ‘ಬೇಕಾದರೆ ನಾನೂ ಕೂಡ ಆನ್‍ಲೈನ್‍ನಲ್ಲಿ ಬುಕ್ ಮಾಡಬಹುದು, ಬಹಳ ಸುಲಭವಿದೆ’ ಎಂದು ಅಬಿಪ್ರಾಯಿಸಿದರು.

ಹೀಗೆ, ಚೇಂಬರ್ ಸಹಕಾರದೊಂದಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ರೂಪಿಸಿರುವ ವೆಬ್‍ಸೈಟ್ ಹಲವರಿಗೆ ಈ ಲಾಕ್‍ಡೌನ್‍ನ ಸಮಯದಲ್ಲಿ ವರದಾನವಾಗಿದೆ. ಸುಬ್ರಹ್ಮಣ್ಯನಗರದ ನಿವಾಸಿಗಳಾದ ಎಂ.ಕೆ. ಕಾರ್ಯಪ್ಪ ದಂಪತಿ ಕೂಡ ಈ ಸೌಲಭ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರಲ್ಲದೆ, ಕೊರೊನಾ ವೈರಸ್‍ನ ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರು ಈ ಆನ್‍ಲೈನ್ ವ್ಯವಸ್ಥೆಯ ಉಪಯೋಗವನ್ನು ಪಡೆದುಕೊಳ್ಳಲು ಕರೆನೀಡುತ್ತಾರೆ.

ಈವರೆಗೆ ಞoಜಚಿguಟeಣsಣಚಿಡಿಣ.iಟಿ ವೆಬ್‍ಸೈಟ್‍ನಲ್ಲಿ ಸುಮಾರು 1,383 ಬಳಕೆದಾರರಿದ್ದು ಈವರೆಗೆ ಸುಮಾರು 400 ರಷ್ಟು ಹೋಂ ಡೆಲಿವರಿಗಳಾಗಿವೆ. ಇದಲ್ಲದೆ, ಹಲವು ನಿವಾಸಿಗಳು ಆನ್‍ಲೈನ್ ಬುಕ್‍ಮಾಡಿ ತಾವೇ ಅಂಗಡಿಗೆ ತೆರಳಿ ಸಾಮಗ್ರಿಗಳನ್ನು ಪಡೆದುಕೊಂಡಿರುತ್ತಾರೆ. -ಜಿ.ಆರ್. ಪ್ರಜ್ಞಾ