ಮಡಿಕೇರಿ, ಏ. 9: ಕಿಗ್ಗಾಲು ಗ್ರಾಮದ ಪಡಿತರ ವಿತರಣಾ ಸಿಬ್ಬಂದಿಗೆ ಈವರೆಗೂ ಬಯೋಮೆಟ್ರಿಕ್ ಬೇಡ ಎನ್ನುವ ಆದೇಶವು ಬಂದಿರುವುದಿಲ್ಲ.

ಈ ಕುಗ್ರಾಮದಲ್ಲಿ ನೆಟ್ ಸಮಸ್ಯೆ ಇರುವುದರಿಂದ ಬೆರಳೊತ್ತು ಸಾಧ್ಯವೂ ಇಲ್ಲ.

ಡಿ.ಸಿ. ಕಚೇರಿಯವರಿಗೆ ಕರೆಮಾಡಿ ತಿಳಿಸಿದರೆ ‘ನಮಗೂ ಆದೇಶ ಬಂದಿಲ್ಲ’ ಎಂದು ಕೈ ಚೆಲ್ಲಿ ಕೂರುತ್ತಾರೆ.

ಈ ಬೆಳಗ್ಗಿನಿಂದ ರೇಷನ್ ಅಂಗಡಿಯಲ್ಲಿ ಪಡಿತರಕ್ಕಾಗಿ ರಣಬಿಸಿಲಿನಲ್ಲಿ ಸರಣಿಯಲ್ಲಿ ಕಾದು ನಿಂತ ಗ್ರಾಮಸ್ಥರು, ಕೊನೆಗೆ 12.30ಗೆ ನಿರಾಶೆಯಿಂದ ಮನೆಗೆ ಬರಿಕೈಯಲ್ಲಿ ವಾಪಸ್ ಮರಳಿದರು.

ಒಂದು ದಿನದ ಉಪಯುಕ್ತ ಭಾಗವನ್ನು ಹೀಗೆ ಸುಮ್ಮನೆ ವ್ಯಯ ಮಾಡಿಸುವುದಾದರೂ ಸರಿಯೇ?

ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವರೇ?

- ಕಿಗ್ಗಾಲು ಎಸ್ ಗಿರೀಶ್