ಮಡಿಕೇರಿ, ಏ. 9: ಮಡಿಕೇರಿ ನಗರದ ವಿವಿಧೆಡೆ ನಗರ ಬಿಜೆಪಿ ಕಾರ್ಯಕರ್ತರು ತಯಾರಿಸಿದ ಮಾಸ್ಕ್‍ಗಳನ್ನು ವಿತರಿಸಲಾಯಿತು. ನಗರಸಭೆಯ ಪೌರಾಯುಕ್ತರಿಗೆ ಪೌರ ಕಾರ್ಮಿಕರಿಗೆ ವಿತರಿಸಲು ಬಿಜೆಪಿ ಕಾರ್ಯಕರ್ತರು ಮಾಸ್ಕ್‍ನ್ನು ನೀಡಿದರು ಮತ್ತು ಚೈನ್‍ಗೇಟ್ ಬಳಿ ಆಶ್ರಯ ಪಡೆಯುತ್ತಿರುವ ಹೊರಗಿನಿಂದ ಕಾರ್ಮಿಕರಾಗಿ ಬಂದು ನಗರದಲ್ಲಿರುವ ಸುಮಾರು 65 ಜನರಿಗೆ ಮಾಸ್ಕ್ ವಿತರಿಸಲಾಯಿತು.