ಸೋಮವಾರಪೇಟೆ, ಮಾ. 7: ಕೊರೊನಾ ವೈರಸ್ ಸೋಂಕು ಹಿನ್ನೆಲೆ ಲಾಕ್‍ಡೌನ್ ಜಾರಿಯಲ್ಲಿರುವ ದರಿಂದ ಮದ್ಯದಂಗಡಿಗಳೂ ಸಹ ಬಂದ್ ಆಗಿದ್ದು, ಈ ನಡುವೆ ಮದ್ಯಕ್ಕಾಗಿ ಕೆಲವರು ಬಾರ್‍ಗಳ ಕಳ್ಳತನಕ್ಕೆ ಯತ್ನಿಸುತ್ತಿದ್ದಾರೆ.ಸೋಮವಾರಪೇಟೆ ಪಟ್ಟಣದಲ್ಲಿರುವ ಎರಡು ವೈನ್ ಶಾಪ್‍ಗಳ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವದು ಬೆಳಕಿಗೆ ಬಂದಿದೆ. ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಎಂಎಸ್‍ಐಎಲ್ ವೈನ್ ಶಾಪ್ ಮತ್ತು ಅಂಚೆ ಕಚೇರಿ ಸಮೀಪವಿರುವ ಆದರ್ಶ ಬಾರ್‍ಗೆ ಕನ್ನ ಹಾಕಲು ಖದೀಮರು ಯತ್ನಿಸಿದ್ದಾರೆ.