ಗೋಣಿಕೊಪ್ಪಲು, ಏ.7: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದೇಶ ಲಾಕ್ ಡೌನ್ ಆದ ಕಾರಣದಿಂದಾಗಿ ಅನೇಕ ಕುಟುಂಬಗಳು ಆಹಾರವಿಲ್ಲದೆ ಇರುವುದನ್ನು ಮನಗಂಡ ಜಿಲ್ಲಾಡಳಿತ ಹಸಿವಿನಿಂದ ಬಳಲುವ ಕುಟುಂಬಗಳಿಗೆ ತುರ್ತುಗಿ ಆಹಾರ ಕಿಟ್ ವಿತರಿಸುವಂತೆ ಸೂಚನೆ ನೀಡಿದೆ. ಅದರಂತೆ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ನಂದೀಶ್ ಕುಮಾರ್ ಮುಂದಾಳ ತ್ವದಲ್ಲಿ ಗೋಣಿಕೊಪ್ಪಲುವಿನ ಆರ್.ಎಂ.ಸಿ. ಗೋದಾಮುವಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಹಾರ ಕಿಟ್ ಜೋಡಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ತಾಲೂಕಿನ ನೋಡಲ್ ಅಧಿಕಾರಿ ಡಾ. ತಮ್ಮಯ್ಯ ಅವರು ಜವಾಬ್ದಾರಿ ವಹಿಸಿಕೊಂಡು ತಾಲೂಕಿನ ವಿವಿಧ ಪಂಚಾಯಿತಿಗಳ ಮೂಲಕ ಆಹಾರ ಕಿಟ್ ವಿತರಣೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಆಹಾರ ಕಿಟ್ ಜೋಡಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೀರಾಜಪೇಟೆ ತಾಲೂಕಿನಲ್ಲಿ ಪಡಿತರ ಚೀಟಿ ಇಲ್ಲದ 1700 ಕುಟುಂಬಗಳಿಗೆ, ಹೊರ ಜಿಲ್ಲೆ, ರಾಜ್ಯದಿಂದ ಆಗಮಿಸಿದ ಕಾರ್ಮಿ ಕರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಕ್ರಮಗಳನ್ನು ತುರ್ತುಗಿ ಕೈಗೊಳ್ಳ ಲಾಗಿದೆ ಎಂದು ತಹಶೀಲ್ದಾರ್ ನಂದೀಶ್ ಕುಮಾರ್, ಹಾಗೂ ನೋಡಲ್ ಅಧಿಕಾರಿ ಡಾ.ತಮ್ಮಯ್ಯ ತಿಳಿಸಿದ್ದಾರೆ.
ಈ ಸಂದರ್ಭ ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಶಶಿಧರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ, ಪೊನ್ನಂಪೇಟೆ ಆರ್.ಐ. ರಾಧಾಕೃಷ್ಣ ಮುಂತಾದ ಅಧಿಕಾರಿಗಳು ಹಾಜರಿದ್ದರು.