ಗೋಣಿಕೊಪ್ಪ ವರದಿ, ಏ. 7: ಅರಿವಿಲ್ಲದೆ ಮಾನವನ ಬದುಕಿನಲ್ಲಿ ಬರುವ ಮೂರು ತೊಂದರೆಗಳನ್ನು ಎದುರಿಸಲು ಹೆಚ್ಚು ಶಕ್ತರಾಗಲು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪೆÇನ್ನಂಪೇಟೆ ರಾಮಕೃಷÀ್ಣ ಶಾರದಾಶ್ರಮ ಅಧ್ಯಕ್ಷ ಬೋಧ ಸ್ವರೂಪನಂದಾ ಅಭಿಪ್ರಾಯಪಟ್ಟರು.

ಪೆÇನ್ನಂಪೇಟೆ ರಾಮಕೃಷÀ್ಣ ಶಾರದಾಶ್ರಮದಲ್ಲಿ ಪತ್ರಕರ್ತರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದರು.

ಮಾನವನ ಅರಿವಿಗೆ ಬಾರದಂತೆ ಆಧ್ಯಾತ್ಮಿಕ, ಆದಿ ಬಹುತಿಕ ಹಾಗೂ ಆದಿ ಧೈವಿಕ ತೊಂದರೆಗಳನ್ನು ಎದುರಿಸುವ ಸಂದರ್ಭಗಳು ಬರುತ್ತವೆ. ಕೊರೊನಾ ಕೂಡ ಇದೇ ರೀತಿಯ ತೊಂದರೆ ನೀಡುತ್ತಿದೆ. ಕೊರೊನಾ ಅಧ್ಯಾತ್ಮಿಕ ತೊಂದರೆ ಯಲ್ಲ. ಬೇರೆಯವರಿಂದ ಉಂಟಾಗು ವಂತಹ ಆದಿ ತೊಂದರೆಯೋ, ಭೂ ಮಂಡಲದಲ್ಲಿನ ಸ್ಥಿತಿಗತಿಯಿಂದ ದೆÉೈವದಿಂದಲೇ ನೀಡಲಾಗುವ ಆದಿ ದೈವಿಕ ತೊಂದರೆಯೋ ಎಂದು ಅರಿವಾಗುತ್ತಿಲ್ಲ. ಆದರೂ ಇದನ್ನು ಮೆಟ್ಟಿ ನಿಲ್ಲಲು ನಾವು ಒಂದಾಗಬೇಕಿದೆ ಎಂದರು. ಸ್ವಚ್ಛತೆ ಮೂಲಕ ನಾವು ಮುನ್ನಡೆಯಬೇಕಿದೆ. ಹಲವು ವಷರ್Àಗಳ ಹಿಂದೆ ಪ್ಲೇಗ್ ರೋಗ ಬಂದಿದ್ದಾಗ ಇದೇ ರೀತಿಯ ತೊಂದರೆಯಾಗಿತ್ತು. ಜನರು ಭಜನೆ, ದೇವರನಾಮ, ನಾಮಸ್ಮರಣೆ ಮೂಲಕ ಭಗವಂತನನ್ನು ನೆನೆಸಿಕೊಂಡು ಕೊರೊನಾ ಹಿಮ್ಮೆಟ್ಟಲು ಮುಂದಾಗಬೇಕು ಎಂದರು.ಈ ಸಂದರ್ಭ ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯದರ್ಶಿ ಎಚ್.ಕೆ. ಜಗದೀಶ್, ಪರಿಹಿತನಂದಾ ಸ್ವಾಮೀಜಿ ಉಪಸ್ಥಿತರಿದ್ದರು.