ಮಡಿಕೇರಿ, ಏ. 4: ದೇಶದಾದ್ಯಂತ ಲಾಕ್ಡೌನ್ ಇದ್ದರು ಅಗತ್ಯ ಸೌಲಭ್ಯಗಳಲ್ಲಿ ಒಂದಾದ ಬ್ಯಾಂಕಿಂಗ್ ಸೇವೆ ಈ ಮೊದಲಿನಂತೆ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ ರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಮಯ ಸಹಕಾರಿ ಬ್ಯಾಂಕ್ಗಳಿಗೂ ಅನ್ವಯವಾಗಲಿದ್ದು ಅವುಗಳು ಕೂಡ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಕಾರ್ಯ ನಿರ್ವಹಿಸಲಿವೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್ .ಕೆ. ಬಾಲಚಂದ್ರ ತಿಳಿಸಿದ್ದಾರೆ.