ಸುಂಟಿಕೊಪ್ಪ, ಏ. 4: ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಬಂಧಿಯಾಗಿದ್ದ ಬಡವರು, ವಯೋವೃದ್ಧರಿಗೆ ಸಮಾಜ ಸೇವಕರಾದ ಇಬ್ರಾಹಿಂ ಬಾಪ್ಪುಟ್ಟಿ ಅವರು ಆಹಾರ ಕಿಟ್‍ಗಳನ್ನು ತಂದು ಠಾಣಾಧಿಕಾರಿ ಬಿ.ತಿಮ್ಮಪ್ಪ ಗ್ರಾ.ಪಂ. ಸದಸ್ಯ ಕೆ.ಇ.ಕರೀಂ ವಿತರಿಸಿದರು.
ಸುಂಟಿಕೊಪ್ಪ ಪಂಪ್ ಬಡಾವಣೆಯಲ್ಲಿ ನೆಲೆಸಿರುವ ಬಡಕೂಲಿ ಕಾರ್ಮಿಕರು ವಯೋವೃದ್ಧರಿಗೆ ಸೋಮವಾರ ಬೆಳಿಗ್ಗೆ ಇಬ್ರಾಹಿಂ ಬಾಪ್ಪುಟ್ಟಿ ಅವರು ಆಹಾರ ಕಿಟ್‍ಗಳನ್ನು ಖರೀದಿಸಿ ವಿತರಿಸಿದರು. ಈ ಸಂದರ್ಭದಲ್ಲಿ ರಜಾಕ್, ಶಂಷು ಗದ್ದೆಹಳ್ಳ, ಅಥೀಕ್ ಪೊಲೀಸ್ ಸಿಬ್ಬಂದಿಗಳು ಇದ್ದರು.