ಸುಂಟಿಕೊಪ್ಪ, ಏ. 4: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗುಡ್ಡೆಹೊಸೂರು ಕ್ಷೇತ್ರದ ಜಿ.ಪಂ. ಸದಸ್ಯ ಹಾಗೂ ಸಂಗಡಿಗರು ಪಟ್ಟಣದ ವಿವಿಧ ವಾರ್ಡ್‍ಗಳಿಗೆ ಕ್ರಿಮಿನಾಶಕ ಸಿಂಪಡಿಸಿದರು. ಶನಿವಾರ ಮಧ್ಯಾಹ್ನ ಕ್ಲೋರಾಪಾರಿವಾಸ್ ಹಾಗೂ ಬ್ಲೀಚಿಂಗ್ ಪೌಡರ್ ಬೆರೆಸಿ ಜನತಾಕಾಲೋನಿ, ಮಧುರಮ್ಮ ಬಡಾವಣೆ, ಪಂಪ್‍ಹೌಸ್, ಗುಡ್ಡಪ್ಪ ರೈ ಬಡಾವಣೆ, ಮಾರುಕಟ್ಟೆ, ಚಾಮುಂಡೇಶ್ವರಿ ಬಡಾವಣೆಗಳಲ್ಲಿ ಚರಂಡಿ, ಮೋರಿಗಳಿಗೆ ಕ್ರಿಮಿನಾಶಕವನ್ನು ಸಿಂಪಡಿಸಿದರು.