ಪೊನ್ನಂಪೇಟೆ, ಏ. 3: ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾಗಿರುವ ಪೊನ್ನಂಪೇಟೆಯ ವಿವಿಧ ಬಡಾವಣೆಗಳ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಕಡುಬಡವರು, ಪಡಿತರ ಚೀಟಿ ಇಲ್ಲದವರು ಹಾಗೂ ಪೌರ ಕಾರ್ಮಿಕರಿಗೆ ಒಂದು ವಾರಕ್ಕೆ ಒಂದು ಕುಟುಂಬಕ್ಕೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಅಕ್ಕಿ, ಬೇಳೆ, ಈರುಳ್ಳಿ, ಆಲೂಗೆಡ್ಡೆ, ಸಕ್ಕರೆ, ಗೋದಿ ಹಿಟ್ಟು, ಉಪ್ಪು, ಸೋಪು ಹಾಗೂ ಬಿಸ್ಕೆಟ್‍ಗಳನ್ನು ಒಳಗೊಂಡ ಕಿಟ್ ಗಳನ್ನು ಗಳನ್ನು ವಿತರಿಸಲಾಯಿತು. ರಸ್ತೆ ಡಾಂಬರೀಕರಣ ಕೆಲಸಕ್ಕೆ ಬಂದು ಪೊನ್ನಂಪೇಟೆಯ ಸರ್ಕಾರಿ ಐಟಿಐ ಕಾಲೇಜು ಸಮೀಪ ಡೇರೆಗಳಲ್ಲಿ ವಾಸವಾಗಿರುವ ಹಾವೇರಿ ಜಿಲ್ಲೆಯ 17 ಜನ ವಲಸೆ ಕಾರ್ಮಿಕರು ಸೇರಿದಂತೆ 120 ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್‍ಗಳನ್ನು ವಿತರಿಸಲಾಯಿತು. ಇಂದು ಕೂಡ ಆಶ್ರಮದ ವತಿಯಿಂದ 200 ಜನರಿಗೆ ಮಧ್ಯಾಹ್ನದ ಊಟ ನೀಡಲಾಯಿತು.
ಈ ಸಂದರ್ಭ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಬೋಧ ಸ್ವರೂಪಾನಂದ ಮಹಾರಾಜ್, ಪರಹಿತನಂದ ಮಹಾರಾಜ್, ಗೋಪೇಂದ್ರನಂದ ಮಹಾರಾಜ್, ಸುಬಲ್ ಮಹಾರಾಜ್, ದೀಪಾಂಕರ್ ಮಹಾರಾಜ್, ಶರತ್, ಸಂತೋಷ್, ಮಹೇಶ್, ದರ್ಶನ್ ಇದ್ದರು.
-ಚನ್ನನಾಯಕ