ಮಡಿಕೇರಿ, ಏ. 3: ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿ ಜಿಲ್ಲೆಯಿಂದ ಪಡಿತರ ಚೀಟಿ ಪಡೆದಿರುವರಿಗೆ ಈಗಾಗಲೇ ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸಲಾಗುತ್ತಿದೆ.

ಹಾಗೆಯೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಕೆಲಸಕ್ಕೆಂದು ಆಗಮಿಸಿರುವ ಕಾರ್ಮಿಕರು ಬೇರೆ ಜಿಲ್ಲೆಯ ಆದ್ಯತಾ ಬಿಪಿಎಲ್/ಪಿಎಚ್‍ಎಚ್ ಅಥವಾ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿದ್ದಲ್ಲಿ ಅವರಿಗೆ ಜಿಲ್ಲೆಯೊಳಗಿನ ಹತ್ತಿರದ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸಲಾಗುವುದು. ಅಂತಹ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಡಳಿತ ಕೋರಿದೆ.