ಮಡಿಕೇರಿ, ಏ. 3: ದೇಶದಲ್ಲಿನ ಕೊರೊನಾದ ಸನ್ನಿವೇಶವನ್ನು ನಿಯಂತ್ರಿಸಲು ಇಡೀ ದೇಶ ಲಾಕ್‍ಡೌನ್ ಆಗಿದ್ದು; ಬಹುತೇಕ ಎಲ್ಲಾ ಚಟುವಟಿಕೆಗಳು ಪ್ರಸ್ತುತ ಸ್ತಬ್ಧಗೊಂಡಿದೆ. ಇಂತಹ ಪರಿಸ್ಥಿತಿ ಯಿಂದಾಗಿ ದೇಶದ ಆರ್ಥಿಕತೆಯ ಮೇಲೂ ತೀವ್ರ ಪೆಟ್ಟು ಬಿದ್ದಂತಾ ಗಿದ್ದು; ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನ, ಕರೆಗೆ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಮೂಲಕ ಸಾಧ್ಯವಾಗುವ ಆರ್ಥಿಕ ನೆರವನ್ನು ನೀಡಲು ಉದ್ದೇಶಿಸಲಾಗಿದೆ. ಈ ಕುರಿತಾಗಿ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರ ನೇತೃತ್ವದಲ್ಲಿ ಚರ್ಚಿಸಿದ್ದು; ಸಂಘದ ಸದಸ್ಯರು, ನಿವೃತ್ತ ಸೈನಿಕರು ತಮ್ಮಿಂದಾಗುವ ಆರ್ಥಿಕ ಸಹಾಯ ವನ್ನು ಪ್ರಧಾನ ಮಂತ್ರಿಯವರಿಗೆ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿ ಸಲು ಸಂಗ್ರಹಿಸಿ ನೀಡಲು ತೀರ್ಮಾನಕೈಗೊಂಡಿದೆ. ಇದರಂತೆ ಮಾಜಿ ಯೋಧರು ಸ್ವಯಂಪ್ರೇರಿತ ರಾಗಿ ಕನಿಷ್ಟ ಅಥವಾ ಗರಿಷ್ಠ ಹಣವನ್ನು ಸಂಘದ ಖಾತೆ ಸಂಖ್ಯೆ 7112500101792401 IಈS ಅoಜe ಏಂಖಃ0000711 ಕರ್ನಾಟಕ ಬ್ಯಾಂಕ್ ಸುಂಟಿಕೊಪ್ಪ ಇಲ್ಲಿಗೆ ಕಳುಹಿಸಬಹುದಾಗಿದೆ.

ಕ್ರೋಢೀಕೃತ ಮೊತ್ತವನ್ನು ಪಾರದರ್ಶಕ ರೀತಿಯಲ್ಲಿ ಪ್ರಕಟಿಸಿ ಒಟ್ಟಾಗಿ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ಒಟ್ಟಿಗೆ ತಲುಪಿಸ ಲಾಗುವದು. ಹೆಚ್ಚಿನ ವಿವರಕ್ಕೆ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ (ಮೊ. 9845331431) ಇವರನ್ನು ಸಂಪರ್ಕಿಸಬಹುದಾಗಿದೆ.