ಗುಡ್ಡೆಹೊಸೂರು, ಏ. 2: ಛಾಯಾಗ್ರಾಹಕರು ಇದೀಗ ತುಂಬಾ ಸಂಕಷ್ಟದಲ್ಲಿದ್ದು ಸರಕಾರ ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್ ಹೇಳಿಕೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಛಾಯಾಗ್ರಾಹಕರು, ವೀಡಿಯೋ ವೃತ್ತಿ ಬಾಂಧವರ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕರುಗಳಿಗೆ, ಸಚಿವರಿಗೆ ಮತ್ತು ಸಂಸದರಿಗೆ ಮನವಿ ನೀಡಲು ನಿರ್ಧರಿಸಲಾಗಿದೆ. ವೈರಸ್‍ನಿಂದ ಮದುವೆ ಹಾಗೂ ಇತರ ಶುಭ ಕಾರ್ಯಗಳು ರದ್ದಾಗಿವೆ. ಛಾಯಾಗ್ರಾಹಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಛಾಯಾಗ್ರಾಹಕರಿಗೆ ಸಹಾಯ ಮಾಡುವಂತೆ ರಾಜ್ಯದ ಎಲ್ಲಾ ಛಾಯಾಗ್ರಾಹಕರ ಪರವಾಗಿ ಜಿ.ಎಂ. ವಿಶುಕುಮಾರ್ ಒತ್ತಾಯಿಸಿದ್ದಾರೆ. - ಗಣೇಶ್ ಕುಡೆಕ್ಕಲ್